ಶ್ರೀಕೃಷ್ಣಮಠಕ್ಕೆ ಕೇ೦ದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕೆರಂದ್ಲಾಜೆ ಭೇಟಿ
ಉಡುಪಿ:ಶ್ರೀಕೃಷ್ಣಮಠಕ್ಕೆ ಗುರುವಾರದ೦ದು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕೆರಂದ್ಲಾಜೆಯವರು ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಮಾಡಿದರು.
ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್ ,ಶ್ರೀಕೃಷ್ಣ ಸೇವಾ ಬಳಗದ ಪ್ರದೀಪ್ ಹೈಟೆಕ್ ಹಾಗೂ ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯರು ಹಾಗೂ ಮ೦ಗಳೂರು ಪ್ರಭಾರಿಯಾಗಿರುವ ಕೆ.ಉದಯಕುಮಾರ್ ಶೆಟ್ಟಿರವರು ಈ ಸ೦ದರ್ಭದಲ್ಲಿ ಹಾಜರಿದ್ದರು.