
ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರ೦ಭ:ಶ್ರೀಸಿದ್ದಲಿಂಗ ಸ್ವಾಮಿಜಿ ಭೇಟಿ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಹಿರಿಯ ವಿದ್ವಾಂಸರಾದ ಎಂ. ನಾರಾಯಣಾಚಾರ್ಯ ಹಾಗೂ ಪೌರಕಾರ್ಮಿಕರಾದ ತಾರಾಮಿ ಬಾಯಿ ಮತ್ತು ಲಕ್ಷ್ಮಣ ಇವರನ್ನು ಸನ್ಮಾನಿಸಿ, ಪಟ್ಟಣಗಲ್ಲಿ ಮಲ ಹೊರುವ ಪದ್ದತಿ ಆರಂಭಿಸಿದವರು ಬ್ರಿಟಿಷರು, ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲವು ಘಾತಕ ಶಕ್ತಿಗಳು ಅದನ್ನು ಮೇಲ್ವರ್ಗದವರ ತಲೆಗೆ ಕಟ್ಟಿ ಸಮಾಜದಲ್ಲಿ ಒಡಕುಂಟು ಮಾಡಿದರು ಎಂದು ಅನುಗ್ರಹಿಸಿದರು.
ತುಮಕೂರಿನ ಶ್ರೀಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿಯವರು,ಮೌಲಿಕ ಶಿಕ್ಷಣದಿಂದಲೇ ದೇಶದ ಬೆಳವಣಿಗೆ ಸಾಧ್ಯ,ಶಾಲೆ ಮತ್ತು ಮನೆ ಎರಡೂ ವಾತಾವರಣಗಳಲ್ಲಿ ಕೂಡ ಮಕ್ಕಳ ಕಲಿಕೆಯ ಮುಖ್ಯ ಕಾರಣಗಳು.ಅದಮಾರು ಮಠದ ಶೈಕ್ಷಣಿಕ ವ್ಯವಸ್ಥೆ ಈ ದಿಸೆಯಲ್ಲಿ ಶ್ರೀವಿಬುಧೇಶತೀರ್ಥರ ಆಶೀರ್ವಾದದೊಂದಿಗೆ ಮುಂದುವರಿಯುತ್ತಿದೆ ಎಂದರು.

