ಶ್ರೀ ಕೃಷ್ಣ ಮಠದಲ್ಲಿ ಜನವರಿ 18 ರಂದು ನಡೆಯಲಿರುವ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಚಪ್ಪರ ಮುಹೂರ್ತವು ಇಂದು ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಜಾಗದಲ್ಲಿ ನಡೆಯಿತು.
ಶ್ರೀ ಮಠದ ಪುರೋಹಿತರಾದ ವೇ.ಮೂ.ಶ್ರೀನಿವಾಸ ಉಪಾಧ್ಯಾಯರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು.
ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಮ ನಾಯ್ಕ್ ಇವರು ಚಪ್ಪರದ ಕಂಬ ನೆಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ , ಸಮಿತಿಯ ಪಿ ಆರ್ ಓ ಬಿ. ವಿ. ಲಕ್ಷ್ಮೀನಾರಾಯಣ,ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪರ್ಯಾಯ ಸಮಿತಿಯ ಯು. ರಾಘವೇಂದ್ರ ರಾವ್, ರಾಮಚಂದ್ರ ಉಪಾಧ್ಯಾಯ, ಭಾಸ್ಕರ ರಾವ್ ಕಿದಿಯೂರು,ಪ್ರವೀಣ ಉಪಾಧ್ಯಾಯ, ರಮಾಕಾಂತ ಭಟ್,ಮಾರ್ಪಳ್ಳಿ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಪದಾಧಿಕಾರಿಗಳು, ಶ್ರೀ ಮಠದ ಸೀತಾರಾಮ ಭಟ್ ಹಾಗೂ ಕೊಟ್ಟಾರಿಗಳಾದ ರಾಘವೇಂದ್ರ ರಾವ್, ಗುತ್ತಿಗೆದಾರರದ ವೆಂಕಟರಮಣ ಹೆಗಡೆ ಹಾಗೂ ರವಿರಾಜ್ ಅಲೆವೂರು ಉಪಸ್ಥಿತರಿದ್ದರು.