
ಉಡುಪಿ ಶ್ರೀಕೃಷ್ಣಮಠಕ್ಕೆ ಶ್ರೀಕಾಶೀಮಠ ಶ್ರೀಸಂಯಮಿಂದ್ರತೀರ್ಥ ಸ್ವಾಮೀಜಿ ಭೇಟಿ…
ಶ್ರೀಕೃಷ್ಣಮಠಕ್ಕೆ ಶ್ರೀಕಾಶೀಮಠ ಸಂಸ್ಥಾನದ ಶ್ರೀಸಂಯಮಿಂದ್ರತೀರ್ಥ ಸ್ವಾಮೀಜಿಯವರು ಶನಿವಾರದ೦ದು ಉಡುಪಿಗಾಗಮಿಸಿದ್ದರು. ಇವರನ್ನು ಸಂಸ್ಕೃತ ಕಾಲೇಜಿನ ಬಳಿಯಿಂದ ಬಿರುದಾವಳಿ, ವಾದ್ಯಘೋಷ, ವೇದಘೋಷದೊಂದಿಗೆ ಸ್ವಾಗತಿಸಿ, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಬರಮಾಡಿಕೊಂಡು ದೇವರ ದರ್ಶನ ಮಾಡಿಸಿದರು. ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ ದಂಪತಿಗಳು ಮಾಲಿಕೆ ಮಂಗಳಾರತಿ ನಡೆಸಿದರು.
