Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕೆಎಸ್​​ಆರ್​​ಟಿಸಿ ಬಸ್ – ಕಾರ್ ಮುಖಾಮುಖಿ ಡಿಕ್ಕಿ: ಕಾರಿನಲ್ಲಿದ್ದ ಭದ್ರಾವತಿಯ ಮೂವರು ಮಹಿಳೆಯರು ಸೇರಿ ನಾಲ್ವರ ಸಾವು

ದಾವಣಗೆರೆ: ಕೆಎಸ್​​ಆರ್​​ಟಿಸಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು ಕಾರ್ ನಲ್ಲಿದ್ದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಒಬ್ಬ ಮಹಿಳೆಗೆ ತೀವ್ರ ಗಾಯಗಳಾಗಿವೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗಾಯಾಳುವನ್ನು ದಾಖಲು ಮಾಡಲಾಗಿದೆ. ಸಾವನ್ನಪ್ಪಿದ ಮಹಿಳೆಯರು ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಯಡಿಹಳ್ಳಿ ಗ್ರಾಮದ ನಿವಾಸಿಗಳು ಮತ್ತು ಕಾರು ಚಾಲಕ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಕುಟುಂಬಸ್ಥರು ಕಾರ್ಯಕ್ರಮಕ್ಕೆಂದು ಹೋಗುತ್ತಿದ್ದರು. ಎದುರಿಗೆ ಬರುತ್ತಿದ್ದ ಸಾರಿಗೆ ಇಲಾಖೆಯ ಬಸ್​ಗೆ ಕಾರು ಡಿಕ್ಕಿ ಹೊಡೆದಿದೆ. ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ವರದಿಗಳ ಪ್ರಕಾರ ಅಪಘಾತದಲ್ಲಿ ಸಾವನ್ನಪ್ಪಿದವರ ವಿವರ ಹೀಗಿದೆ: ಕಾರ್ ಚಾಲಕ ಸುನೀಲ್ (30), ದ್ರಾಕ್ಷಾಯಿಣಮ್ಮ (40), ಸುಮಾ (45) ಮತ್ತು ಶಾರದಮ್ಮ (65) ಸಾವನ್ನಪ್ಪಿದವರು. ಇವರೆಲ್ಲಾ ಸ್ವಗ್ರಾಮದಿಂದ ಜೋಗಕ್ಕೆ ಮದುವೆಂದು ಹೋಗುತ್ತಿದ್ದರು. ಆಶಾ ಎಂಬ ಮಹಿಳೆಗೆ ಗಂಭೀರ ಗಾಯಗಲಾಗಿವೆ.

No Comments

Leave A Comment