
ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭ-ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಸಮಾಜ ಸೇವೆಯಲ್ಲಿ ರಿಕ್ಷಾ ಚಾಲಕರಾದ ಎಸ್.ವೆಂಕಟೇಶ ಪೈ, ಪೌರಕಾರ್ಮಿಕರಾದ ದಂಡ್ಯಮ್ಮ ಮತ್ತು ವಿಜಯ ಇವರನ್ನು ಸನ್ಮಾನಿಸಿ, ನಿಷ್ಠೆಯಿಂದ ಯಾವ ಕೆಲಸವನ್ನು ಕರ್ತವ್ಯ ಎಂದು ಮಾಡಿದಲ್ಲಿ ದೇವರ ಅನುಗ್ರಹ ಖಂಡಿತ ಎಂದು ಅನುಗ್ರಹಿಸಿದರು.
ಮೂಡಬಿದರೆಯ ಕಾರಿಂಜೆ ಮಠದ ಶ್ರೀಮುಕ್ತಾನಂದ ಸ್ವಾಮೀಜಿಯವರು,ರಾಮನು ಹನುಮನ ಭಕ್ತಿಯನ್ನು ಹೇಗೆ ಒಪ್ಪಿಕೊಂಡನೋ ಹಾಗೇ ನಾವು ಗುರುಗಳ ಮೂಲಕ ದೇವರನ್ನು ಕಾಣಬೇಕು ಎಂದು ಹರಸಿದರು.
ರವಿ ಡಿ.ಚೆನ್ನಣ್ಣನವರ್ ಜೀವನದಲ್ಲಿ ಕ್ರಮಿಸಬೇಕಾದ ಒಬ್ಬರು ಹಾದಿ ತೋರಿಸಬಹುದು,ಕ್ರಮಿಸಬೇಕಾದ್ದು ನಾವೇ, ತೋರಿಸುವವರು ನಮ್ಮ ಮುಂದಿರುವ ಶ್ರೀಪಾದರು,ಸನ್ಯಾಸಿಗಳು ಎಂದು “ಪ್ರಜ್ಞಾವಂತ ಸಮಾಜ ನಿರ್ಮಾಣ”ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆರ್ಥಿಕ ತಜ್ಞರಾದ ಬೆಂಗಳೂರಿನ ಎಸ್.ವಿಶ್ವನಾಥ ಭಟ್ಟರು “ಸ್ವಯಂ ಅವಲಂಬಿತ ಭಾರತ” ದ ಕುರಿತು ಉಪನ್ಯಾಸ ನೀಡಿದರು.
ಅಭ್ಯಾಗತರಾಗಿ ಹಿರಿಯ ಕನ್ನಡ ಚಲನಚಿತ್ರ ನಟರಾದ ಬೆಂಗಳೂರಿನ ರಮೇಶ್ ಭಟ್,ದೈವಾರಾಧಕರಾದ ಕುಮಾರ್ ಪಂಬದ ಮುಲ್ಕಿ ಭಾಗವಹಿಸಿದರು.
ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
