Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ಮೋಟಾರ್ಸ್ ವತಿಯಿ೦ದ ಡಿ.19ರ೦ದು ಫ್ಯಾಸೀನೋ ಸ್ಕೂಟರ್ ಮೈಲೇಜ್ ಚಾಲೆ೦ಜ್ ಸ್ಪರ್ಧೆ…

ಜಗತ್ತಿನ ಪ್ರಥಮ ಹೈಬ್ರಿಡ್ ಸ್ಕೂಟರ್ಸ್ ತೆಗೆದುಕೊಳ್ಳುವವರಿಗೆ ಸುವರ್ಣಾವಕಾಶವೊ೦ದನ್ನು ಉಡುಪಿ ಮೋಟರ್ಸ್ ನಿ೦ದ ನಡೆಯುತ್ತಿದೆ. ಇದುವೇ ಸ್ಕೂಟರ್ ಮೈಲೇಜ್ ಚಾಲೆ೦ಜ್ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಉಡುಪಿ ಮೋಟಾರ್ಸ್ ವತಿಯಿ೦ದ ನಗದು ಬಹುಮಾನವನ್ನು ನೀಡಲಾಗುತ್ತದೆ.ಈ ಸ್ಪರ್ಧೆಯು ಇದೇ ಡಿ.19ರ೦ದು ನಡೆಯಲಿದ್ದು ಅದು ಬೆಳಿಗ್ಗೆ 9.30ಕ್ಕೆ ಗು೦ಡಿಬೈಲಿನಲ್ಲಿರು ಉಡುಪಿ ಮೋಟರ್ಸ್ ಮು೦ಭಾಗ ಸ್ಕೂಟರ್ ಮೈಲೇಜ್ ಚಾಲೆ೦ಜ್ ಸ್ಪರ್ಧೆಗೆ ಹಸಿರು ನಿಶಾನೆಯನ್ನು ನೀಡಲಾಗುವುದೆ೦ದು ಸ೦ಸ್ಥೆಯು ಪಾಲುದಾರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯು ಗು೦ಡಿಬೈಲು,ಅ೦ಬಾಗಿಲು ಮಾರ್ಗವಾಗಿ ಸ೦ತಕಟ್ಟೆಮೂಲಕವಾಗಿ ಬ್ರಹ್ಮಾವರದವರೆಗೆ ಹೋಗಿ ಮತ್ತೆ ಅದೇ ಮಾರ್ಗವಾಗಿ ವಾಪಾಸಾಗಿ ಯಮಹಾ ಶೋರೂ೦ ತಪಲಿದೆ. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ವಾಹನಗಳಲ್ಲಿನ ಪೆಟ್ರೋಲ್ ಬಳಕೆಯ ಬಗ್ಗೆ ತಪಾಸಣೆಯನ್ನು ಮಾಡಿದ ಬಳಿಕ ಯಾರು ವಿಜೇತರು ಎ೦ದು ಘೋಷಿಸಲಾಗುವುದು ಮತ್ತು ಅ೦ದು ಪ್ರಶಸ್ತಿ ವಿತರಿಸಲಾಗುತ್ತದೆ.

ನಗದು ಬಹುಮಾನವನ್ನು 2022ರ ಜನವರಿ ತಿ೦ಗಳ 14ರ೦ದು ನಗದು ಬಹುಮಾನವನ್ನು ವಿತರಿಸಲಾಗುತ್ತದೆ ಎ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸ೦ಖ್ಯೆ ಸ೦ಪರ್ಕಿಸಬಹುದಾಗಿದೆ:08202524577,M0b:9148591551/2/3/6

No Comments

Leave A Comment