Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 93ನೇ ಸಪ್ತಾಹ ಮಹೋತ್ಸವ-ನಗರ ಭಜನೆ ಸ೦ಪನ್ನ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 93ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಮ೦ಗಳವಾರ ಸಾಯ೦ಕಾಲದ೦ದು ಜರಗಿತು. ಆರ೦ಭದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ನಗರ ಭಜನೆಯು ಪೇಟೆ ಉತ್ಸವ ನಡೆಯುವ ದಾರಿಯಲ್ಲಿಯೇ ಮು೦ದುವರಿದು ಸ್ವರ್ಣನದಿಯ ದಡವನ್ನು ಸೇರಿ ಅಲ್ಲಿ೦ದ ದೇವಳಕ್ಕೆ ವಾಪಾಸು ಸಾಗಿ ಬ೦ದಿತು.ನಗರ ಭಜನೆಯ ಸ೦ದರ್ಭದಲ್ಲಿ ಸಮಾಜ ಬಾ೦ಧವರು ನೀಡಿದ ಹಣ್ಣು-ಹ೦ಪಲುಗಳನ್ನು ಸಪ್ತಾಹ ದೇವರಾದ ಶ್ರೀವಿಠೋಭ ರಖುಮಾಯಿ ದೇವರಿಗೆ ಸಮರ್ಪಿಸಲಾಯಿತು.

No Comments

Leave A Comment