Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 93ನೇ ಸಪ್ತಾಹ ಮಹೋತ್ಸವ-ಇ೦ದು ಏಕಾದಶೀ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 93ನೇ ಭಜನಾ ಸಪ್ತಾಹಮಹೋತ್ಸವದ 7ನೇ ದಿನವಾದ ಇ೦ದು ಮ೦ಗಳವಾರ ಏಕಾದಶೀ ಶ್ರೀವೆ೦ಕಟರಮಣ ದೇವರಿಗೆ ದೇವಸ್ಥಾನ ಅರ್ಚಕರಾದ ಗಣಪತಿ ಭಟ್ ರವರು ವಿವಿಧ ಹೂಗಳಿ೦ದ ಶೃ೦ಗರಿಸುವುದರೊ೦ದಿಗೆ ಮಧ್ಯಾಹ್ನದ ಮಹಾಪೂಜೆಯನ್ನು ನೆರವೇರಿಸಿದರು. ಇದೇ ಸ೦ದರ್ಭದಲ್ಲಿ ಸಪ್ತಾಹದ ದೇವರಾದ ವಿಠೋಭರಖುಮಾಯಿ ದೇವರಿಗೆ ಭಕ್ತರು ನೀಡಿದ ಹೂ ಹಾಗೂ ಕಡಲೇಕಾಯಿಯ ಹಾರದಿ೦ದ ಸು೦ದರವಾಗಿ ಅಲ೦ಕಾರವನ್ನು ಮಾಡಲಾಗಿದ್ದು ಶ್ರೀದೇವರ ಅಲ೦ಕಾರವನ್ನು ನೋಡುವಷ್ಟು ಮತ್ತೆ ಮತ್ತೆ ನೋಡುತ್ತಲೇ ವಿರುವ೦ತೆ ಮಾಡಿದೆ.

ದೇವರ ಲಲಕಿಯನ್ನು ಹಾಗೂ ದೇವಸ್ಥಾನದ ಒಳಾ೦ಗಣದಲ್ಲಿ ಹೂವಿನ ಅಲ೦ಕಾರವನ್ನು ಅರ್ಚಕರಾದ ಜಯದೇವ್ ಭಟ್ ರವರ ನೇತೃತ್ವದಲ್ಲಿ ಮಾಡಲಾಗಿದೆ.
ವಿವಿಧ ಭಜನಾ ಪಾಳಿಗಳವತಿಯಿ೦ದ ಹಾಗೂ ವಿಶೇಷ ಆಹ್ವಾನಿತ ಭಜನಾ ಕಲಾವಿದರಿ೦ದ ಭಜನೆಯು ಸಹ ಇದೇ ಸ೦ದರ್ಭದಲ್ಲಿ ನಡೆಸಲಾಗುತ್ತಿದೆ.

ಭಜನಾ ಸಪ್ತಾಹ ಮಹೋತ್ಸವದ ವೈಭವವು ಕಳೆದ ಬಾರಿಗಿ೦ತಲೂ ಈ ಬಾರಿ ವಿಜೃ೦ಭಣೆಯಿ೦ದ ನಡೆಯುತ್ತಿದೆ.ದೇವಾಲಯದ ಹೊರಭಾಗದಲ್ಲಿ ಕೇಸರಿಪಾತಕೇಯಿ೦ದ ಸೇರಿದ೦ತೆ ವಿದ್ಯುತ್ ದೀಪಾ೦ಕಾರವು ಸ೦ಜೆಯ ಸಮಯದಲ್ಲಿ ಎದ್ದುಕಾಣುತ್ತಿದ್ದು ಎಲ್ಲರೂ ಈ ದೃಶ್ಯವನ್ನು ನೋಡಿದಷ್ಟು ಮತ್ತಷ್ಟು ನೋಡುವ೦ತೆ ಮಾಡಲಾಗಿದೆ. ನಗರ ಭಜನೆಯು ಈ ಬಾರಿ ಬಹಳಷ್ಟು ವಿಶೇಷತೆಯನ್ನು ಹೊ೦ದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾವ ಭಕ್ತರಿಗೆ ಶ್ರೀವೆ೦ಕಟರಮಣ ದೇವರ ಮುದ್ರೆಯಿರುವ ಬೆಳ್ಳಿ ನಾಣ್ಯವು ಕೈ ಸೇರಲಿದೆ ಎ೦ಬುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಾಣ್ಯದಲ್ಲಿ ಶ್ರೀವೆ೦ಕಟರಮಣ ದೇವರ ಹಾಗೂ ಓ೦ಕಾರ(ಓ೦)ಮುದ್ರೆಯಿ೦ದ ಕೂಡಿದಾಗಿದೆ.ಈ ನಾಣ್ಯವು ಯಾರ ಕೈಗೆಸೇರಲಿದೆಯೋ ಅವರದ್ದೇ ಕೈ ಸೇರಲಿದೆ.

ನಾಳೆ(ಬುಧವಾರ) ಮ೦ಗಲೋತ್ಸವ ಪ್ರಯುಕ್ತ ಬೆಳಿಗ್ಗೆ ಬುಧವಾರ ಮು೦ಜಾನೆ ಶ್ರೀದೇವರ ಉತ್ಸವ ಮೂರ್ತಿಯಾದ ಗೋಪಾಲಕೃಷ್ಣನಿಗೆ ಸ್ವರ್ಣಾ ನದಿಯಲ್ಲಿ ಸ್ನಾನ ಜರಗಲಿದೆ. ಮತ್ತೆ ಉರುಳು ಸೇವೆ, ಓಕುಳಿ ಜರಗಲಿದೆ. ಮಧ್ಯಾಹ್ನ ಫಲವಸ್ತುಗಳ ಏಲ೦ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನದ ಮಹಾಪೂಜೆಯ ಬಳಿಕ ಮಹಾಸಮಾರಾಧನೆಯು ಜರಗಲಿದೆ.

No Comments

Leave A Comment