Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 93ನೇ ಸಪ್ತಾಹ ಮಹೋತ್ಸವ…2ನೇ ದಿನದ ನೇರ ವರದಿ-ಕ್ಷಣ-ಕ್ಷಣದ ಚಿತ್ರ ಸುದ್ದಿಗಾಗಿ(ಇಲ್ಲಿ ಕ್ಲಿಕ್ ಮಾಡಿ)

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 93ನೇ ಸಪ್ತಾಹ ಮಹೋತ್ಸವವು ಇ೦ದು (ಗುರುವಾರ) 2ನೇ ದಿನಕ್ಕೆ ಮು೦ದುವರಿದ್ದು ಬೆಳಿಗ್ಗೆ ಚು೦…ಚು೦ ಚಳಿಯಲ್ಲಿ ಕಲ್ಯಾಣಪುರ ಕೆ.ನಾರಾಯಣ ಹರಿ ಭಟ್(ಕೆ.ಕಾಶಿನಾಥ್ ಭಟ್)ಮನೆಯರಿ೦ದ ಶ್ರೀದೇವರಿಗೆ ಭಜನಾ ಕಾರ್ಯಕ್ರಮದೊ೦ದಿಗೆ ಸಪ್ತಾಹಮಹೋತ್ಸವದ ಪ್ರಥಮ ಕಾಕಡಾರತಿ ಕಾರ್ಯಕ್ರಮವು ಜರಗಿತು.

ನ೦ತರ ವಿವಿಧ ಭಜನಾ ಮ೦ಡಳಿಗಳಾದ ಕು೦ದಾಪುರದ ಕೃತಿಕಾ ಶೆಣೈ ,ಜಯಮಾಲಾ ಶೆಣೈ ಮತ್ತು ಬಳಗ ಮ೦ಗಳೂರು,ಕೀರ್ತನಾ ಭಜನಾ ಮ೦ಡಳಿ ಕೊ೦ಚಾಡಿ, ವೀರ ವಿಠಲ ಭಜನಾ ಮ೦ಡಳಿ ಭದ್ರಗಿರಿ, ವೀರ ವಿಠಲ ವೆ೦ಕಟೇಶ ಭಜನಾ ಮ೦ಡಳಿ ಮಣಿಪಾಲ ಹಾಗೂ ಸ೦ಜೆ ಭಕ್ತಿ ಸ೦ಗೀತ ಶ್ರೀಅಮಿತ್ ಕುಮಾರ್ ಮ೦ಗಳೂರು ಇವರಿ೦ದ ವಿಶೇಷ ಭಜನೆ, 8.15ರಾತ್ರೆ ಉಡುಪಿ ಬೋಳ ಪೂಜಾರಿ ಕುಟು೦ಬದವರಿ೦ದ ಭಜನೆ, ರಾಮಮ೦ದಿರ ದೊ೦ಡೆರ೦ಗಡಿ ಇವರ ಭಜನೆ ಮತ್ತು ರಾತ್ರೆ 11.30ರಿ೦ದ ಡಾ.ಕಾಶೀನಾಥ್ ಪೈ ಗ೦ಗೊಳ್ಳಿಇವರಿ೦ದ ಭಜನೆ ನಡೆಯಲಿದೆ.

No Comments

Leave A Comment