ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಅಪಾರ ಜಿಲ್ಲಾಧಿಕಾರಿಗಳಾಗಿ ನಿವೃತ್ತರಾದ ಎಸ್.ಎ.ಪ್ರಭಾಕರ ಶರ್ಮ,ಮಂಗಳೂರು ಇವರನ್ನು ಸನ್ಮಾನಿಸಿ ,ಹಿಂದೂ ಧರ್ಮದಲ್ಲಿ ಮಾತ್ರ ಪುನರ್ಜನ್ಮ ಎಂಬುದು ಇರುವುದರಿಂದ ತಪ್ಪು ಮಾಡಿದರೂ ಮತ್ತ್ತೊಂದು ಜನ್ಮದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದ್ದು,ಬೇರೆ ಧರ್ಮಗಳಲ್ಲಿ ಅದು ಸಾಧ್ಯವಿಲ್ಲ,ಆದ್ದರಿಂದ ನಮ್ಮ ಹಿಂದೂ ಧರ್ಮವೇ ಶ್ರೇಷ್ಠ ಎಂದು ಅನುಗ್ರಹಿಸಿದರು.
ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿಯವರು ನಮ್ಮ ಅನುಷ್ಟಾನದ ಪದ್ದತಿ ವ್ಯತ್ಯಾಸವಾದರೂ ಚಿಂತನೆ ಒಂದೇ ಇರುವದರಿಂದ ನಮ್ಮನ್ನು ಪರ್ಯಾಯ ಶ್ರೀಪಾದರು ಕರೆಸಿ ನಾವೆಲ್ಲರೂ ಧನ್ಯರಾದೆವು ಎಂದು ನುಡಿದರು.
ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಅವರು “ಪ್ರಾಚೀನ ಮತ್ತು ಜೀವಂತವಿರುವ ಹಿಂದೂ ನಾಗರೀಕತೆಯ ಭಾಗವಾಗಿರಲು ಹೆಮ್ಮೆ” ಎಂಬ ವಿಶೇಷ ಉಪನ್ಯಾಸ ನೀಡಿದರು.
ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಮತ್ತು ಎಂ.ಎಲ್.ಸಾಮಗರು ಸ್ವಾಗತಿಸಿದರು.ಆಸ್ಥಾನ ವಿದ್ವಾಂಸರಾದ ಕುತ್ಪಾಡಿ ಕೃಷ್ಣರಾಜ ಭಟ್ ರವರು ಕಾರ್ಯಕ್ರಮ ನಿರ್ವಹಿಸಿದರು.