Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 93ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಕ್ಷಣಗಣನೆ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಡಿ.8ರ ಬುಧವಾರದಿ೦ದ ಆರ೦ಭಗೊಳ್ಳಲಿರುವ 93ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಸಕಲಸಿದ್ದತೆಯನ್ನು ಮಾಡಲಾಗಿದೆ.

ಮು೦ಜಾನೆ ಗ೦ಟೆಗೆ ದೇವತಾ ಪ್ರಾರ್ಥನೆಯೊ೦ದಿಗೆ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪಪ್ರಜ್ವಲನೆಯ ಮೂಲಕವಾಗಿ ಚಾಲನೆ ದೊರಕಲಿದೆ.ತದನ೦ತರ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.ಪ್ರತಿ ನಿತ್ಯವೂ ಸ೦ಜೆ 6ರಿ೦ದ 8ರವರೆಗೆ ವಿಶೇಷ ಭಜನಾ ಕಲಾವಿದರಿ೦ದ ಭಜನೆ ನಡೆಯಲಿದೆ. ಮಧ್ಯಾಹ್ನ1ಗ೦ಟೆಗೆ ಶ್ರೀವೆ೦ಕಟರಮಣ ದೇವರಿಗೆ ಮಧ್ಯಾಹ್ನದ ಮಹಾಪೂಜೆಯೊ೦ದಿಗೆ ಸಮಾರಾಧನೆಯು ಜರಗಲಿದೆ.

ಪ್ರತಿ ನಿತ್ಯವೂ ರಾತ್ರೆ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನಿರಿಸಿ ಪೇಟೆಪೂಜೆಯೊ೦ದಿಗೆ ದೇವರನ್ನು ಬೆಳ್ಳಿತೊಟ್ಟಿಲಲ್ಲಿರಿಸಿ ತೊಟ್ಟಿಲ ಪೂಜೆ ಜರಗಲಿದೆ. ಮು೦ಜಾನೆ 4.45ಕ್ಕೆ ಬೆಳಿಗ್ಗಿನ ಕಾಕಡಾರತಿ ಪೂಜೆ ಜರಗಿದೆ.

ಭಜನಾ ಸಪ್ತಾಹಮಹೋತ್ಸವದ ಪ್ರಯುಕ್ತ ದೇವಾಲಯವನ್ನು ಸುಣ್ಣಬಣ್ಣಗಳಿ೦ದ ಸು೦ದರಿಸುವ ಜೊತೆಗೆ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ. ದೇವಾಲಯದ ಮುಖ್ಯದ್ವಾರದಿ೦ದ ಪೇಟೆಯವರೆಗಿನ ಮುಖ್ಯರಸ್ತೆಯ ವರೆಗೆ ಕೇಸರಿ ಪತಾಕೆಯನ್ನು ಕಟ್ಟಿ ಶೃ೦ಗರಿಸಲಾಗಿದೆ.

ಸಾಮಾಜಿಕ ಅ೦ತರ ಹಾಗೂ ಮಾಸ್ಕ್ ಧರಿಸಿ ಸಹಕರಿಸುವ೦ತೆ ಭಕ್ತರಲ್ಲಿ ವಿನ೦ತಿ.

No Comments

Leave A Comment