Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

AK-203 ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ, ಮಿಲಿಟರಿ ಸಹಕಾರಕ್ಕಾಗಿ 10 ವರ್ಷಗಳ ಒಪ್ಪಂದ ನವೀಕರಣ

ನವದೆಹಲಿ: ಭಾರತ ಮತ್ತು ರಷ್ಯಾ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಹಕಾರವನ್ನು ಒಳಗೊಂಡ ಹಲವಾರು ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳಿಗೆ ಸಹಿ ಹಾಕಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ರಷ್ಯಾ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರನ್ನು ಭೇಟಿಯಾದ ನಂತರ ತಿಳಿಸಿದ್ದಾರೆ.

“ಭಾರತಕ್ಕೆ ರಷ್ಯಾದ ಬಲವಾದ ಬೆಂಬಲವನ್ನು ಭಾರತ ಶ್ಲಾಘಿಸುತ್ತದೆ. ನಮ್ಮ ಸಹಕಾರವು ಇಡೀ ಪ್ರದೇಶಕ್ಕೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ. ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಹಕಾರಕ್ಕೆ ಸಂಬಂಧಿಸಿದಂತೆ ಹಲವಾರು ಒಪ್ಪಂದಗಳು/ ಪ್ರೋಟೋಕಾಲ್‌ಗಳಿಗೆ ಸಹಿ ಹಾಕಿರುವುದು ಸಂತೋಷ ತಂದಿದೆ” ಎಂದು ರಾಜನಾಥ್ ಸಿಂಗ್ ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವ ರಾಜನಾಥ್ ಸಿಂಗ್ ಅವರು, ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಶೋಯಿಗು ಅವರೊಂದಿಗಿನ ಮಾತುಕತೆ “ಉತ್ಪಾದಕ, ಫಲಪ್ರದ ಮತ್ತು ಗಣನೀಯ” ಎಂದು ಕರೆದಿರುವ ರಾಜನಾಥ್ ಸಿಂಗ್, “ಭಾರತವು ರಷ್ಯಾದೊಂದಿಗೆ ತನ್ನ ವಿಶೇಷ ಮತ್ತು ವಿಶಿಷ್ಠ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತದೆ” ಎಂದು ಹೇಳಿದ್ದಾರೆ.

2021 ರಿಂದ 2031ರ ವರೆಗೆ ಮಿಲಿಟರಿ-ತಾಂತ್ರಿಕ ಸಹಕಾರ ವ್ಯವಸ್ಥೆಯಡಿ ಭಾರತ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ 6,01,427 ಅಸಾಲ್ಟ್ ರೈಫಲ್ಸ್ AK-203 ಖರೀದಿ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ.

No Comments

Leave A Comment