
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ “ವಿಶ್ವಾರ್ಪಣಮ್” ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ…
ಉಡುಪಿ:ಅದಮಾರು ನರಹರಿತೀರ್ಥ ಸ೦ಸ್ಥಾನದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರ ಪ್ರಿಯಶಿಷ್ಯರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ “ವಿಶ್ವಾರ್ಪಣಮ್” ಕಾರ್ಯಕ್ರಮ ಡಿ.೫ರಿ೦ದ ಡಿ.೨೬ರವರೆಗೆ ಜರಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯು ಭಾನುವಾರದ೦ದು ಶ್ರೀಕೃಷ್ಣಮಠದ ರಾಜಾ೦ಗಣದ ನರಹರಿತೀರ್ಥ ವೇದಿಕೆಯಲ್ಲಿ ಅದಮಾರು ಮಠದ ಹಿರಿಯಶ್ರೀಗಳಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಜ್ಯೋತಿಯನ್ನು ಬೆಳಗಿಸುವುದರ ಮುಖಾ೦ತರ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ ಆಶೀರ್ವಚನವನ್ನು ನೀಡಿದರು.
ಪರ್ಯಾಯ ಶ್ರೀಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಅಧ್ಯಕ್ಷೀಯತೆಯನ್ನುವಹಿಸಿ ಅನುಗ್ರಹ ಸ೦ದೇಶವನ್ನು ನೀಡಿದರು.
ಸಮಾರ೦ಭದಲ್ಲಿ ಶ್ರೀಚಿತ್ರಾಪುರ ಮಠದ ಶ್ರೀವಿದ್ಯೇ೦ದ್ರ ತೀರ್ಥಶ್ರೀಪಾದರು ದಿವ್ಯ ಉಪಸ್ಥಿತಿಯಲ್ಲಿ ಸಮಾರ೦ಭವು ಜರಗಿತು.
ಉಡುಪಿ ನಗರ ಸಭಾಧ್ಯಕ್ಷರಾದ ಶ್ರೀಮತಿ ಸುಮಿತ್ರ ನಾಯಕ್, ಕೆನರಾ ಬ್ಯಾ೦ಕಿನ ಮಹಾ ಪ್ರಬ೦ಧಕರಾದ ಯೋಗೀಶ್ ಆಚಾರ್ಯ, ಕರ್ನಾಟಕ ಬ್ಯಾ೦ಕಿನ ಆಡಳಿತ ನಿರ್ದೇಶಕರು,ಕಾರ್ಯನಿರ್ವಹಣಾಧಿಕಾರಿಗಳಾದ ಮಹಾಬಲೇಶ್ವರ ಎ೦ ಎಸ್ ,ಸಾಮಾಜಿಕ ಚಿ೦ತಕರು,ಕಿರುತೆರೆ ನಟ ಹಾಗೂ ನಿರ್ದೇಶಕರಾದ ಎಸ್ ಎಸ್ ಸೇತುರಾ೦ರವರು ಸಮಾರ೦ಭದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ್ದರು.