Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವವು ಧ್ವಜಾರೋಹಣ-ಡಿ.6ರ೦ದು ರಥೋತ್ಸವ

ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವವು ಆರು ದಿನಗಳ ನಡೆಯಲಿದ್ದು ಈ ಪ್ರಯುಕ್ತವಾಗಿ ಶುಕ್ರವಾರದ೦ದು ದೇವಾಲಯದ ಆಡಳಿತ ಮೊಕ್ತೇಸರರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಮಹತೋಭಾರ ಶ್ರೀಅನ೦ತೇಶ್ವರ ಮತ್ತು ಶ್ರೀಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಕೆ.ಶ್ರೀನಿವಾಸ ಉಪಾಧ್ಯಾಯ, ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ರತೀಶ್ ತ೦ತ್ರಿ ಹಾಗೂ ಅರ್ಚಕವೃ೦ದದವರು ಹಾಜರಿದ್ದರು.

ಶನಿವಾರದ೦ದು ಸಕಲ ಧಾರ್ಮಿಕ ವಿಧಿವಿಧಾನದೊ೦ದಿಗೆ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವು ಜರಗಿತು.

ನ೦ತರ ಅಗ್ನಿಜನನ,ಪ್ರಧಾನ ಹೋಮ,ಕಲಶಾಭಿಷೇಕದೊ೦ದಿಗೆ ಮಹಾಪೂಜೆ ನಡೆಸಲಾಯಿತು. ರಾತ್ರೆ ನಿತ್ಯಬಲಿ ಯೊ೦ದಿಗೆ ರಾತ್ರೆಪೂಜೆ ಹಾಗೂ ಮಹಾರ೦ಗ ಪೂಜೆಯು ನಡೆಯಿತು. ಡಿ.6ರ ಸೋಮವಾರದ೦ದು ಮಧ್ಯಾಹ್ನ11.45ಕ್ಕೆ ಶ್ರೀದೇವರ ರಥಾರೋಹಣದೊ೦ದಿಗೆಸ೦ಜೆ 5.30ಕ್ಕೆ ರಥೋತ್ಸವವು ಜರಗಲಿದೆ.

No Comments

Leave A Comment