Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ವಾರ್ ಆದ್ರೂ ಚಿಂತೆಯಿಲ್ಲ, ಡಿಸೆಂಬರ್ 14 ರ ನಂತರ ಡಿಕೆಶಿಗೆ ನಾನು ಏನೆಂಬುದನ್ನು ತೋರಿಸುತ್ತೇನೆ: ರಮೇಶ್ ಜಾರಕಿಹೊಳಿ

ಬೆಳಗಾವಿ: ವಾರ್ ಆದ್ರೂ ಚಿಂತೆಯಿಲ್ಲ. ಡಿಸೆಂಬರ್ 14ಕ್ಕೆ ನಾನು ಏನೆಂಬುದನ್ನು ತೋರಿಸುತ್ತೀನೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.

ದೆಹಲಿಯಿಂದ ವಾಪಸಾದ ನಂತರ  ಮಾಧ್ಯಮಗಳೊಂದಿಗ ಮಾತನಾಡಿದ ಅವರು, ಬೇರೆಯವರ ಹಾಗೆ ನಾನು ಹತಾಶ ಮನೋಭಾವದಿಂದ ಮಾತನಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಡಿ. ಕೆ. ಶಿವಕುಮಾರ್ ವ್ಯಕ್ತಿತ್ವ ಹಾಗೂ ನನ್ನ ವ್ಯಕ್ತಿತ್ವ ಏನು ಎಂಬುದನ್ನು ಹೇಳುತ್ತೇನೆ ಎಂದರು. ಬೇಕಿದ್ದರೆ ವಾರ್ ಆಗಲಿ ಎಂದು ಸವಾಲು ಹಾಕಿದ್ದಾರೆ.

ನನ್ನ ಬಗ್ಗೆ ಡಿ. ಕೆ. ಶಿವಕುಮಾರ್ ಏನೇ ಆರೋಪ ಮಾಡಿದರೂ ನಾನು ಈಗ ಉತ್ತರ ಕೊಡುವುದಿಲ್ಲ‌. ನಾನು ಈಗ ಚುನಾವಣೆಯ ಮೂಡ್‌ನಲ್ಲಿದ್ದೇನೆ. ನನ್ನ ಶಕ್ತಿ ಏನೆಂದು ಡಿ. ಕೆ. ಶಿವಕುಮಾರ್ ಬೆಳಗಾವಿಗೆ ಬಂದು ಮಾತನಾಡಿದ್ದನ್ನು ತೆಗೆದು ನೋಡಿ ಎಂದು ರಮೇಶ್ ಜಾರಕಿಹೊಳಿ ನೆನಪಿಸಿದರು.

1985 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳುತ್ತೇನೆ. ಓಪನ್ ವಾರ್ ಆಗಲಿ ಅಂದು ರಮೇಶ್ ಜಾರಕಿಹೊಳಿ ಖಡಕ್ಕಾಗಿ ಹೇಳಿದರು. ಫಲಿತಾಂಶದ ದಿನವೇ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದು ಖಾರವಾಗಿ ಉತ್ತರಿಸಿದರು‌.

1 ಗಂಟೆ ಸುದ್ದಿಗೋಷ್ಠಿ ನಡೆಸಿ ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬದ ನಡುವೆ ಏನಿತ್ತು ಎಂಬುದರ ಬಗ್ಗೆ ಬಹಿರಂಗವಾಗಿ ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮೇಲೆ ದಿಲ್ಲಿ ವರಿಷ್ಠರ ಆಶೀರ್ವಾದ ಇರುವುದರಿಂದ ಇಂದು ನಾನು ಜೀವಂತ ಇದ್ದೇನೆ. ಇಲ್ಲವಾದ್ರೆ ಇಷ್ಟೊತ್ತಿಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು. ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು.

ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ ಎಂದ ರಮೇಶ್ ಜಾರಕಿಹೊಳಿ, ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14 ನೇ ತಾರೀಕು ಹೇಳುತ್ತೇನೆ. ಈಗ ಇರುವ ಎಂಎಲ್ಎಗಳನ್ನು ಉಳಿಸಿಕೊಳ್ಳಿ ಆಮೇಲೆ ನೋಡೊಣ ಎಂದು ಹೇಳಿದ್ದಾರೆ.

No Comments

Leave A Comment