Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಯಕ್ಷಗಾನ ಕಲಾರಂಗ ಪ್ರಶಸ್ತಿ-‘ಸಾಯುಜ್ಯ ಸಂಗ್ರಾಮ’ ಪ್ರಾದ್ಸಂಗದ ತೆಂಕುತಿಟ್ಟು ಯಕ್ಷಗಾನ

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠ,ಶ್ರೀಕೃಷ್ಣ ಮಠದ ಆಶ್ರಯದಲ್ಲಿ,ಪರ್ಯಾಯ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಹಾಗೂ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು,’ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ ಯನ್ನುಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ,ಮೂಡಬಿದರೆ ಇವರಿಗೆ ಮತ್ತು ಗಣ್ಯವ್ಯಕ್ತಿಗಳ ಸ್ಮರಣಾರ್ಥ ಸ್ಥಾಪಿಸಲಾದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ,ಯಕ್ಷಗಾನದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಜೀವಮಾನದ ಸಾಧನೆ ಮಾಡಿದ ಒಟ್ಟು 18 ವ್ಯಕ್ತಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ‘ನಮ್ಮ ನಿತ್ಯದ ಕೆಲಸವನ್ನೇ ದೇವರ ಪೂಜೆಯೆಂದು ಭಾವಿಸಿ ಮಾಡಬೇಕು’ ಮತ್ತು ಉತ್ತಮ ಕೆಲಸ ಮಾಡುತ್ತಿರುವ ಕಲಾರಂಗವು ಗುರುಗಳಾದ ಶ್ರೀವಿಶ್ವೇಶತೀರ್ಥರಿಗೆ ಅತ್ಯಂತ ಪ್ರಿಯವಾದ ಈ ಕೆಲಸವು ಅವರಿಗೆ ನಾವು ಕೊಡುವ ಗೌರವ’ ಎಂದು ತಿಳಿಸಿ ಆಶೀರ್ವಚನ ನೀಡಿದರು.ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಡಾ.ಮೋಹನ್ ಆಳ್ವ,ಡಾ.ಚಂದ್ರಶೇಖರ ದಾಮ್ಲೆ,ಕಲಾರಂಗದ ಪದಾಧಿಕಾರಿಗಳಾದ ಅಧ್ಯಕ್ಷ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಳಿ ಕಡೆಕಾರ್,ನಾರಾಯಣ ಹೆಗಡೆ,ಎಸ್.ವಿ.ಭಟ್,ಗಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ ಮತ್ತು ಗಣ್ಯವ್ಯಕ್ತಿಗಳ ಸ್ಮರಣಾರ್ಥ ಸ್ಥಾಪಿಸಲಾದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರಧಾನ ಸಮಾರಂಭದ ಸಂದರ್ಭದಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ,ಮೂಡಬಿದರೆ ಇದರ ವಿದ್ಯಾರ್ಥಿಗಳಿಂದ ‘ಸಾಯುಜ್ಯ ಸಂಗ್ರಾಮ’ ಪ್ರಾದ್ಸಂಗದ ತೆಂಕುತಿಟ್ಟು ಯಕ್ಷಗಾನ ನಡೆಯಿತು.

No Comments

Leave A Comment