Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಡಿ. 5ರಿಂದ 26ರ ವರೆಗೆ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ದೀಕ್ಷಾ ಸಮಾಪನ ” ವಿಶ್ವಾರ್ಪಣಮ್” ಕಾರ್ಯಕ್ರಮ

ಉಡುಪಿ:ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ದೀಕ್ಷಾ ಸಮಾಪನ ” ವಿಶ್ವಾರ್ಪಣಮ್” ಕಾರ್ಯಕ್ರಮ ಡಿ. 5ರಿಂದ 26ರ ವರೆಗೆ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಸಮಾರಂಭದಲ್ಲಿ ಸುಮಾರು 80 ಮಂದಿ ಸಾಧಕರನ್ನು ಗೌರವಿಸಲಾಗುತ್ತಿದ್ದು, ವಿವಿಧ ಗಣ್ಯರು, ಸಾಧಕರ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಪರ್ಯಾಯ ಅದಮಾರು ಶ್ರೀಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದರಾಜ್ ರವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ. 5ರಂದು ಸಂಜೆ 4 ಗಂಟೆಗೆ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು. ಶಾಸಕ ರಘುಪತಿ ಭಟ್, ಕರ್ಣಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಂ.ಎಸ್., ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಮಣಿಮೇಖಲೈ, ನಟ ಎಸ್. ಎನ್. ಸೇತುರಾಮ್ ಭಾಗವಹಿಸುವರು.

ಡಿ. 8ರಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. 10ರಂದು ಕರ್ನಾಟಕ ಚಲಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, 11ರಂದು ಕಾರ್ಮಿಕ ಸಚಿವ ಎ. ಶಿವರಾಮ ಹೆಬ್ಬಾರ್ ಅಭ್ಯಾಗತರಾಗಿರುವರು.

ಗೋವು- ಕೃಷಿಕರ ಸಮ್ಮೇಳನ
ಡಿ. 12ರಂದು ಬೆಳಿಗ್ಗೆ 8.30ರಿಂದ ರಾಜ್ಯ ಮಟ್ಟದ ದೇಶೀ ಗೋ ಉತ್ಪನ್ನ ತಯಾರಕರು ಮತ್ತು ಕೃಷಿಕರ ಸಮ್ಮೇಳನ ಆಯೋಜಿಸಲಾಗಿದ್ದು, ಪಶುಸಂಗೋಪನೆ ಖಾತೆ ಸಚಿವ ಪ್ರಭು ಚವ್ಹಾಣ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ, ಗೋ ಸೇವಾಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಭಾಗವಹಿಸುವರು.

13ರಂದು ಸಂಜೆ 4 ಗಂಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ಚಚನ ನೀಡುವರು. 15ರಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. 16ರಂದು ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಉಪನ್ಯಾಸ ನೀಡಲಿದ್ದಾರೆ. 17ರಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

18ರಂದು ಅಂಕಣಗಾರ್ತಿ ಸಹನಾ ವಿಜಯಕುಮಾರ್ ಕಾಶ್ಮೀರದ ಸ್ಥಿತಿಗತಿ ಬಗ್ಗೆ ಉಪನ್ಯಾಸ ನೀಡುವರು ಎಂದು ಗೋವಿಂದರಾಜ್ ವಿವರಿಸಿದರು.

19ರಂದು ಬೆಳಗ್ಗೆ 8.30ಕ್ಕೆ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಶಿಬಿರ ನಡೆಯಲಿದೆ.

26ರಂದು ಸಮಾರೋಪ
ಡಿ. 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಷ್ಟಮಠಾಧೀಶರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಭಗವಂತ ಖೂಬಾ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅದಮಾರು ಮಠದಿಂದ ನೀಡಲಾಗುವ 50 ಸಾವಿರ ರೂ. ನಗದು ಸಹಿತ 2ನೇ ವರ್ಷದ “ನರಹರಿತೀರ್ಥ” ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಶ್ರೀಪಾದ ತಿಮ್ಮಣ್ಣ ಭಟ್ ಸಾಲ್ಕೋಡು ಅವರಿಗೆ ನೀಡಿ ಗೌರವಿಸಲಾಗುವುದು ಎ೦ದರಲ್ಲದೇ ಡಿ. 11ರಿಂದ 19ರ ವರೆಗೆ ರಾಜಾಂಗಣದಲ್ಲಿ ರಾಷ್ಟ್ರಮಟ್ಟದ ಕಲಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗೋವಿಂದರಾಜ್ ತಿಳಿಸಿದರು.

ಶ್ರೀಕೃಷ್ಣ ಸೇವಾ ಬಳಗದ ಸದಸ್ಯರಾದ ಕೃಷ್ಣರಾಜ ಕುತ್ಪಾಡಿ, ಪ್ರದೀಪ್ ರಾವ್, ಶ್ರೀಶ ಭಟ್ ಕಡೆಕಾರ್, ರೋಹಿತ್ ತಂತ್ರಿ, ಸಂತೋಷ್ ಕಟಪಾಡಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment