Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಭಯೋತ್ಪಾದಕರಿಗೆ ಹಣ ವರ್ಗವಣೆ : ಮಂಗಳೂರಿನ ದಂಪತಿ ಸಹಿತ ನಾಲ್ವರಿಗೆ 10 ವರ್ಷ ಕಠಿಣ ಶಿಕ್ಷೆ

ರಾಯಪುರ: ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಮಂಗಳೂರು ಮೂಲದ ದಂಪತಿ ಸಹಿತ ನಾಲ್ವರಿಗೆ ಛತ್ತೀಸ್‌ಗಢ ರಾಯಪುರದ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಮಂಗಳೂರು ಮೂಲದ ಜುಬೇರ್ ಹುಸೇನ್(42), ಆತನ ಪತ್ನಿ ಆಯೇಷಾ ಬಾನೋ(39) ಮತ್ತು ಧೀರಜ್ ಸಾವೋ(21), ಪಪ್ಪು ಮಂಡಲ್ ಮೇಲಿನ ಆರೋಪ ಸಾಬೀತಾಗಿದೆ.

ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ನ್ಯಾಯಧೀಶ ಅಜಯ್ ಸಿಂಗ್ ರಜಪೂತ್ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ಪ್ರಕರಣ: ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪದ ಮೇಲೆ 2013ರಲ್ಲಿ ಧೀರಜ್ ಸಾವೋನನ್ನು ಬಂಧಿಸಲಾಗಿತ್ತು. ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ಬ್ಯಾಂಕ್ ಖಾತೆಗೂ ಸಹ ಈತ ಹಣವನ್ನು ಜಮೆ ಮಾಡುತ್ತಿದ್ದನು.

ಆಯೇಷಾ ಎಂಬಾಕೆ ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದಳು. ಅದು ಅಲ್ಲದೇ ಈಕೆ ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಈ ಮೂಲಕ ಉಗ್ರರಿಗೆ ಹಣವನ್ನು ಜಮೆ ಮಾಡುತ್ತಿದ್ದಳು. ಯಾರಿಗೂ ಸಂದೇಹ ಬರದಂತೆ ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ಪರು ಬಂಧಕ್ಕೊಳಗಾದ ಬಳಿಕ 2013ರಲ್ಲಿ ಈಕೆಯನ್ನು ಬಿಹಾರದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.

No Comments

Leave A Comment