Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಪ್ರಯಾಣಿಕರಿಂದ ಸುಮಾರು 3 ಕೆಜಿ ಚಿನ್ನ ವಶ

ಬೆಂಗಳೂರು: ಕೊಲಂಬೊದಿಂದ ಎಂಟು ಮಹಿಳೆಯರು ಸೇರಿದಂತೆ ಹತ್ತು ಸದಸ್ಯರ ಗ್ಯಾಂಗ್ ತಮ್ಮ ದೇಹದಲ್ಲಿ ಸುಮಾರು 3 ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಕಳ್ಳ ಸಾಗಣೆ ಮಾಡಲು ನಡೆಸಿದ ಯತ್ನವನ್ನು ಏರ್‌ಪೋರ್ಟ್ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್ ವಿಫಲಗೊಳಿಸಿದೆ. ಪ್ರಯಾಣಿಕರ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟ ಚಿನ್ನದ ಒಟ್ಟು ಮೌಲ್ಯ ಸುಮಾರು 1.52 ಕೋಟಿ ರೂ. ಆಗಿದೆ.

ನವೆಂಬರ್ 20 ಶನಿವಾರ ರಾತ್ರಿ ಸುಮಾರು 10-30ಕ್ಕೆ ಶ್ರೀಲಂಕಾ ಏರ್ ಲೈನ್ಸ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ತಂಡದ ಅನುಮಾನಾಸ್ಪದ ವರ್ತನೆ ಮೇರೆಗೆ ಪರಿಶೀಲಿಸಿ ಅವರಿಂದ ಒಟ್ಟು 3066.55 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ಹೇಳಿವೆ.

ಕೋವಿಡ್‌ನಿಂದಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ವಿಮಾನಗಳು ಕಾರ್ಯನಿರ್ವಹಿಸದ ಕಾರಣ, ದ್ವೀಪ ರಾಷ್ಟ್ರದಿಂದ ಚಿನ್ನದ ಕಳ್ಳಸಾಗಣೆ ತಾತ್ಕಾಲಿಕವಾಗಿ ನಿಂತಿತ್ತು. ಕೋವಿಡ್‌ಗೆ ಮುಂಚಿತವಾಗಿ ಕಳ್ಳಸಾಗಣೆಯು ಆಗಾಗ್ಗೆ ನಡೆಯುತ್ತಿತ್ತು ಮತ್ತು ಈಗ ವಿಮಾನಗಳ ಪುನರಾರಂಭದೊಂದಿಗೆ ಇದು ಪುನರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment