Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಭಾರಿ ಮಳೆ: ಜಲಾವೃತ್ತ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BS Bommai) ಅವರು ಇಂದು ಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ(Kendriya Vihar apartment)ಕ್ಕೆ ಭೇಟಿ ನೀಡಿ ಮಳೆ(Flood Affected)ಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು.

ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಪರಿಶೀಲನೆ ನಡೆಸಿದರೆ. ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath ) ಜೀಪ್ ನಲ್ಲಿ ತೆರಳಿ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ‘ಕಳೆದ ಮೂರು ದಿನಗಳಿಂದ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ ಕೆರೆ ಕೋಡಿ ಹೊಡೆದು ಆ ನೀರು ಅಪಾರ್ಟ್ಮೆಂಟ್​​ಗೆ ನುಗ್ಗಿದೆ. ಯಲಹಂಕ ಶಾಸಕರು ಸ್ಥಳಕ್ಕೆ ಆಗಮಿಸಿ ಜನರಿಗೆ ಸಂಪೂರ್ಣ ಸಹಾಯ ಮಾಡಿದ್ದಾರೆ. ಇದಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡಿದ್ದೀನಿ. ಇಲ್ಲಿ ಹನ್ನೊಂದು ಕೆರೆಗಳು ಯಲಹಂಕಕ್ಕೆ ಸೇರುತ್ತದೆ ಎಂದು ಹೇಳಿದರು.

ರಾಜಕಾಲುವೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಇನ್ನು ಯಲಹಂಕ ಕೆರೆ ದೊಡ್ಡದಿದ್ದು, ಅದರ ಹೊರ ಹರಿವೂ ಕೂಡ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಹೊರ ಹರಿವು ಕೂಡ ದೊಡ್ಡ ಪ್ರಮಾಣದಲ್ಲಿದ್ದು, ಹೀಗಾಗಿ ರಾಜಕಾಲುವ ಸಾಮರ್ಥ್ಯ ಸಾಲುತ್ತಿಲ್ಲ. ಅಲ್ಲದೆ ರಾಜಕಾಲುವೆ ಅತಿಕ್ರಮಣ ಆಗಿರುವುದೂ ಕೂಡ ಜನನಿವಾಸ ಪ್ರದೇಶಗಳು ಜಲಾವೃತವಾಗಲು ಕಾರಣವಾಗುತ್ತಿದೆ. ಆದ್ದರಿಂದ ಮಳೆ ನಿಂತ ತಕ್ಷಣವೇ ರಾಜಕಾಲುವೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ಈ ಸಂಬಂಧ ಬಿಬಿಎಂಪಿ ಮತ್ತು ಎಂಜಿನಿಯರ್ ಗಳಿಗೆ ಸೂಚಿಸಲಾಗಿದ್ದು, ರಾಜಕಾಲುವೆ ಅಗಲೀಕರಣಕ್ಕೆ ಎಲ್ಲೆಲ್ಲಿ ಅಡಚಣೆ ಇದೆ ಆ ಜಾಗದ ಮಾಲೀಕರೊಂದಿಗೆ ಮಾತನಾಡಿ, ಟಿಡಿಆರ್ ನೀಡುವ ವ್ಯವಸ್ಥೆ ಮಾಡಬೇಕು. ಈಗ 8 ಅಡಿ ಇರುವ ರಾಜಕಾಲುವೆಯನ್ನು ಇನ್ನೂ ಹೆಚ್ಚಿಸಿ 30 ಅಡಿಗೇರಿಸಬೇಕು. ಎರಡೂ ರಾಜಕಾಲುವೆ ಯಾವುದೇ ರೀತಿಯ ಅಡಚಣೆ ಇಲ್ಲದೇ ನೀರು ಹರಿವಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಅಂತೆಯೇ ಪ್ರಸ್ತುತ ಜಲಾವೃತ್ತವಾಗಿರುವ ಅಪಾರ್ಟ್ ಮೆಂಟ್ ನಲ್ಲಿ 603 ಅಪಾರ್ಟ್ ಮೆಂಟ್ ಗಳಿದ್ದು, ಇಲ್ಲಿ ನೀರಿನ ಹರಿವಿನ ಸಮಸ್ಯೆ ಕುರಿತು ನಿವಾಸಿಗಳೊಂದಿಗೆ ಮಾತನಾಡಿದ್ದೇನೆ. ಅವರೂ ಕೂಡ ಬೇಕಾದ ನೆರವು ನೀಡುವ ಕುರಿತು ಭರವಸೆ ನೀಡಿದ್ದಾರೆ. ಇಲ್ಲಿಂದ ನೀರು ಹೊರಹಾಕಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ನೀರು ಮುಂದೆ ಹೋಗಬೇಕು. ಹೀಗಾಗಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲೇ ಹೆದ್ದಾರಿ ಮಾರ್ಗವಾಗಿ ಒಳಚರಂಡಿ ಪೈಪ್ ಲೈನ್ ಅಳಡಿಸಿ ನೀರು ಶೇಖರಣವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಆಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಸಿಎಂ ಭೇಟಿ
ಬಳಿಕ ಕಳೆದ ಕೆಲವು ದಿನಗಳ ಭಾರಿ ಮಳೆಗೆ ಜಲಾವೃತವಾಗಿದ್ದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಸಂಸ್ಥೆಯ ಮುಖ್ಯಸ್ಥ ಭಾರತರತ್ನ ಸಿ.ಎನ್.ಆರ್.ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

No Comments

Leave A Comment