Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉಡುಪಿಯಲ್ಲಿ ಸ೦ಭ್ರಮದ ಕನಕ ಜಯಂತಿ

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕನಕ ಜಯಂತಿ ಆಚರಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಪರ್ಯಾಯ ಶ್ರೀಪಾದರು, ಹಿಂದೂ ಧರ್ಮದಿಂದ ಮತಂತರಗೊಳ್ಳದಿರುವ ರೀತಿಯಲ್ಲಿ ಎಲ್ಲಿ ನ್ಯೂನತೆ ಇದೆಯೋ ಅಲ್ಲಿ ಸರಿಪಡಿಸಿ ಮುಂದಿನ ಕನಕ ಜಯಂತಿಯನ್ನು ಆಚರಿಸೋಣ ಎಂದು ಅನುಗ್ರಹ ಸಂದೇಶ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಹೊಳ್ಳ ಇವರು ದಿಕ್ಸೂಚಿ ಭಾಷಣ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ನಗರ ಸಂಚಾಲಕರಾದ ರಾಮಚಂದ್ರ ಸನಿಲ್ ಉಪಸ್ಥಿತರಿದ್ದರು.

ಕನಕ ಸಮಾಜ ಸೇವಾ ಸಂಘದ ಸದಸ್ಯರು ಹಾಗೂ ಹಾಲು ಮಠದ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಮಾಜದ ವಿವಿಧ ಸಾಧಕರನ್ನು ಶ್ರೀಪಾದರು ಗೌರವಿಸಿದರು.

No Comments

Leave A Comment