ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ವಿಶಾಖಪಟ್ಟಂ ನೌಕಾಪಡೆಗೆ ಸೇರ್ಪಡೆ
ಮುಂಬೈ: ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ವಿಶಾಖಪಟ್ಟಂ ಅನ್ನು ಇಂದು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
ಇಂದು ಈ ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮುಖ್ಯಅತಿಥಿಯಾಗಿದ್ದು, ರಾಜನಾಥ್ ಸಿಂಗ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇಂದು ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಗೆ ಐಎನ್ಎಸ್ ವಿಶಾಖಪಟ್ಟಣಂ ಅನ್ನು ಅಧಿಕೃತನವಾಗಿ ನಿಯೋಜಿಸುವ ಮೂಲಕ, ರಾಷ್ಟ್ರಕ್ಕೆ ನೌಕೆಯನ್ನು ಸಮರ್ಪಿಸಿದರು. ಈ ಐಎನ್ಎಸ್ ವಿಶಾಖಪಟ್ಟಣಂ ಹಡಗು ಪ್ರಾಜೆಕ್ಟ್ 15ಬಿಯ ಕ್ಷಿಪಣಿ ವಿಧ್ವಂಸಕ ಶಿಪ್ ಆಗಿದೆ.
ದೇಶೀಯವಾದ ಡಿಎಂಆರ್ 249ಎ ಉಕ್ಕು ಬಳಸಿ ಈ ಐಎನ್ಎಸ್ ವಿಶಾಖಪಟ್ಟಣಂ ಹಡಗನ್ನು ನಿರ್ಮಿಸಲಾಗಿದ್ದು, ಇದು ಭಾರತದಲ್ಲಿ ತಯಾರಿಸಲಾದ ಅತಿದೊಡ್ಡ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ. ಇದರ ಒಟ್ಟಾರೆ ಉದ್ದ 163 ಮೀಟರ್ಗಳಿದ್ದು, 704 ಟನ್ಗಳಷ್ಟು ಭಾರವನ್ನು ಸ್ಥಳಾಂತರ ಮಾಡಬಹುದಾಗಿದೆ. ಈ ನೌಕೆಯಲ್ಲಿ ಶಸ್ತ್ರಾಸ್ತ್ರಗಳ ಅಳವಡಿಗೆ ಮುಂದುವರಿದ ವಿಧಾನದಲ್ಲಿ ಇದ್ದು, ಬಹುವಿಧದ ಕಾರ್ಯ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ. ಈ ಕ್ಷಿಪಣಿ ಧ್ವಂಸಕ ಹಡಗು ಶಕ್ತಿಯುತ ಅನಿಲ ಮತ್ತು ಅನಿಲ ಸಂಚಲನೆಯಿಂದ ಚಾಲಿತವಾಗಲ್ಪಡುತ್ತದೆ. ಅಲ್ಲದೆ, ಎರಡು ಹೆಲಿಕಾಪ್ಟರ್ಗಳನ್ನು ಹೊರುವಷ್ಟು ಬಲಿಷ್ಠವಾಗಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ಡಿಜಿಟಲ್ ನೆಟ್ವರ್ಕ್ಗಳು, ಕಾಂಬ್ಯಾಟ್ ಮ್ಯಾನೇಜ್ಮೆಂಟ್ ವ್ಯವಸ್ಥೆ, ಇಂಟಿಗ್ರೇಟೆಡ್ ಪ್ಲಾಟ್ಫಾರ್ಮ್ ನಿರ್ವಹಣಾ ವ್ಯವಸ್ಥೆಯೊಂದಿಗೆ ಹೆಚ್ಚಿನ ಮಟ್ಟದಲ್ಲಿ ಯಾಂತ್ರೀಕೃತಗೊಂಡಿದೆ.
INS ವಿಶಾಖಪಟ್ಟಣಂ 75 ಪ್ರತಿಶತ ಸ್ವದೇಶಿ ಯುದ್ಧ ನೌಕೆ
INS ವಿಶಾಖಪಟ್ಟಣಂ ಅನ್ನು ಮುಂಬೈನ ಮಡಗಾವ್ ಡಾಕ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದ್ದು, ಈ ಯುದ್ಧನೌಕೆಯ ಪ್ರಮುಖ ವಿಷಯವೆಂದರೆ ಇದರ 75 ಪ್ರತಿಶತ ಭಾಗವು ಸಂಪೂರ್ಣವಾಗಿ ಸ್ವದೇಶಿಯಾಗಿದೆ. ಮುಂಬರುವ ವರ್ಷಗಳಲ್ಲಿ ಈ ವರ್ಗದ ಇನ್ನೂ ಮೂರು ಯುದ್ಧನೌಕೆಗಳನ್ನು 35,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. INS ವಿಶಾಖಪಟ್ಟಣಂ 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಇದರ ತೂಕ 7,400 ಟನ್ ಆಗಿದೆ. ಈ ಯುದ್ಧನೌಕೆ ಅತ್ಯಂತ ಆಧುನಿಕವಾಗಿದೆ. ಇದು ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆಯಾಗಿದ್ದು, ಇದರಲ್ಲಿ 50 ಅಧಿಕಾರಿಗಳು ಸೇರಿದಂತೆ ಸುಮಾರು 300 ಸೈನಿಕರನ್ನು ನಿಯೋಜಿಸಬಹುದಾಗಿದೆ.
ಹಲವು ವರ್ಷಗಳ ಕಾಲ ವಿವಿಧ ಪ್ರಯೋಗಗಳ ನಂತರ, ಶತ್ರು ವಿಧ್ವಂಸಕ ಐಎನ್‌ಎಸ್ ವಿಶಾಖಪಟ್ಟಣಂ ಈಗ ನೌಕಾಪಡೆಗೆ ಸೇರಲು ಸಿದ್ಧವಾಗಿದೆ. ಈ ಯುದ್ಧನೌಕೆಯಲ್ಲಿ ಹಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಐಎನ್‌ಎಸ್ ವಿಶಾಖಪಟ್ಟಣಂನಲ್ಲಿ ಸ್ವದೇಶಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಲಾಗಿದೆ. ಅದರ ಮೇಲೆ ನಿಯೋಜಿಸಲಾದ ಕ್ಷಿಪಣಿಯು 70 ಕಿಮೀ ದೂರದಲ್ಲಿ ಹಾರುವ ಶತ್ರು ಯುದ್ಧ ವಿಮಾನವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಐಎನ್ ಎಸ್ ವಿಶಾಖಪಟ್ಟಣಂ ಪರಮಾಣು, ಜೈವಿಕ ಮತ್ತು ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುವುದಲ್ಲದೆ, ಸಮುದ್ರದಲ್ಲಿ ಒಂದು ಕಿಲೋಮೀಟರ್ ಆಳದಲ್ಲಿ ಜಲಾಂತರ್ಗಾಮಿ ನೌಕೆಗಳಲ್ಲಿ ಅಡಗಿರುವ ಶತ್ರುಗಳನ್ನು ಸಮಾಧಿ ಮಾಡಬಲ್ಲದು.