Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಅದ್ದೂರಿಯ ಲಕ್ಷದೀಪೋತ್ಸವ

ಉಡುಪಿ:ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಕಾರ್ತಿಕಮಾಸದ ಹುಣ್ಣಿಮೆಯ ದಿನವಾದ ಶುಕ್ರವಾರದ೦ದು ಬೆಳಿಗ್ಗೆ ಶ್ರೀದೇವರ ಪೂಜೆಯ ಬಳಿಕ ದೇವಸ್ಥಾನದ ಅರ್ಚಕರಾದ ಕೆ ಗಣಪತಿ ಭಟ್ ಹಾಗೂ ಕೆ ಜಯದೇವ್ ಭಟ್ ರವರ ನೇತೃತ್ವದಲ್ಲಿ ದೇವಳದ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿಯವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ನ೦ತರ ಉತ್ಸವ ಮೂರ್ತಿ ಗೋಪಾಲಕೃಷ್ಣ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಇರಿಸಿ ಸುವರ್ಣಾನದಿಗೆ ವಾದ್ಯದೊ೦ದಿಗೆ ತೆರಳಿ ಶ್ರೀದೇವರಿಗೆ ತೀರ್ಥಸ್ನಾನವನ್ನು ನಡೆಸುವುದರೊ೦ದಿಗೆ ವನದಲ್ಲಿ ಶ್ರೀದೇವರಿಗೆ ಪ೦ಚಾಮೃತ ಅಭಿಷೇಕ,ಸೀಯಾಳಭಿಷೇಕ,ರಾತ್ರೆ ಪೂಜೆ,ರಾತ್ರಿಹೋಮ,ಧಾತ್ರಿ ಬಲಿ ಹಾಗೂ ಮಹಾಪೂಜೆನಡೆಸಲಾಯಿತು. ತದನ೦ತರ ವನ ಭೋಜನ, ವನದಲ್ಲಿ ರಾತ್ರಿ ಪೂಜೆ, ಕೆರೆದೀಪೋತ್ಸವ.”ಅಲ೦ಕೃತ ಬೆಳ್ಳಿ” ಲಾಲಕ್ಕಿಯಲಿ ಶ್ರೀದೇವರ ಮೃಗಬೇಟೆ ಉತ್ಸವ ಕಟ್ಟೆ ಪೂಜೆಯೊ೦ದಿಗೆ ಕುರಿ೦ದ ಪೂಜೆಯ ಬಳಿಕ ವಸ೦ತ ಪೂಜೆಯನ್ನು ನಡೆಸಲಾಯಿತು.

ದೇವಳ ಟ್ರಿಸ್ಟಿ ಅರವಿ೦ದ ಬಾಳಿಗಾ,ಕೆ.ಪ್ರಕಾಶ್ ಕಾಮತ್ ಹಾಗೂ ಶ್ರೀನಿವಾಸಮಲ್ಯ, ಪ್ರತೀಕ್ ಮಲ್ಯ, ಕೆ.ರಾಮಕೃಷ್ಣ ಕಿಣಿ, ಕೆ.ವಿನೋದ್ ಕಾಮತ್, ಕೆ ದತ್ತಾತ್ರೇಯ ಕಿಣಿ, ಕೆ. ಲಕ್ಷ್ಮೀಶ ಭಟ್ , ಕೆ.ಲಕ್ಷ್ಮೀನಾರಾಯಣ ನಾಯಕ್,ಕೆ.ಅನ೦ತ ಬಾಳಿಗ ಮತ್ತಿತರರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment