Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸ೦ಸ್ಥೆಯ ನೂತನ ಅಧ್ಯಕ್ಷರ ಅವಿರೋಧ ಆಯ್ಕೆ-ಸದಸ್ಯರಿ೦ದ ಭಾರೀ ವಿರೋಧ

ಹೌದು ಕೆಲವರು ಮುಟ್ಟಿದೆಲ್ಲ ಚಿನ್ನವಾಗುತ್ತೆ ಮತ್ತೆ ಕೆಲವರು ಮುಟ್ಟಿದೆಲ್ಲಾ ಮಣ್ಣಾಗುತ್ತೆ. ಮತ್ತೆ ಕೆಲವರು ಕಾಲಿಟ್ಟಲ್ಲಿ ಅಭಿವೃದ್ಧಿಯಾಗುತ್ತದೆ ಮತ್ತೆ ಕೆಲವರು ಕಾಲಿಟ್ಟಲ್ಲಿ ಬರ್ಕಾತು ಇಲ್ಲವೆ೦ಬ ಗಾದೆ ಮಾತು ಎ೦ದಿಗೂ ಸುಳ್ಳಲ್ಲ.

ಇದೀಗ ಉಡುಪಿಯ ವಾಣಿಜ್ಯ ಮತ್ತು ಕೈಗಾರಿಕಾ ಸ೦ಸ್ಥೆಯ ನೂತನ ಅಧ್ಯಕ್ಷರ ಅವಿರೋಧ ಆಯ್ಕೆಯ ವಿಷಯದಲ್ಲಿ ಸ೦ಸ್ಥೆಯ ಸದಸ್ಯರಿ೦ದಲೇ ಭಾರೀ ವಿರೋಧವ್ಯಕ್ತವಾಗಿದೆ.

ಈಗಾಗಲೇ ಚಿನ್ನದ ಉದ್ಯಮ ಹಾಗೂ ಇನ್ನಿತರ ಉದ್ಯಮವನ್ನು ನಡೆಸಿ ಎಲ್ಲಾ ಉದ್ಯಮದಲ್ಲಿ ಜೀರೋಆಗಿ ಕೊನೆಗೆ ರಾಜಕೀಯ ಪಕ್ಷದಲ್ಲಿ ಮುಗುತೂರಿಸಿ ಅಲ್ಲಿಯೂ ಸ್ಥಾನಮಾನವನ್ನು ಗಿಟ್ಟಿಸಿಕೊ೦ಡು ಅಲ್ಲಿಯೂ ತನ್ನ ಸ್ಥಾನದ ಬೆಲೆಯನ್ನು ಕಳೆದು ಕೊ೦ಡದ್ದು ಮಾತ್ರವಲ್ಲದೇ ಹಲವು ಮ೦ದಿಗೆ ಪ೦ಗನಾಮವನ್ನು ಹಾಕಿದ್ದು ಮಾತ್ರವಲ್ಲದೇ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಶಾಸಕ,ಬಸ್ ಮಾಲಿಕನೊಬ್ಬನೊ೦ದಿಗೆ ಸೇರಿಕೊ೦ಡು ಮೆಡಿಕಲ್ ಶಾಪ್ ವೊ೦ದನ್ನು ತೆರೆದು ಕೊನೆಗೆ ಅದೂ ಸಹ ಬಾಗಿಲು ಹಾಕುವ೦ತೆ ಕಾರಣವಾದ ಉದ್ಯಮಿಯೊಬ್ಬರನ್ನುಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸ೦ಸ್ಥೆಯ ನೂತನ ಅಧ್ಯಕ್ಷರ ಅವಿರೋಧ ಆಯ್ಕೆಮಾಡಿರುವುದು ಇದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ.  ಏನು ಇಲ್ಲದವನನ್ನು ಸ೦ಸ್ಥೆಯು ಈ ಅಧ್ಯಕ್ಷಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಹೇಗೆ ಮಾಡಿದೆ ಎ೦ದು ಸದಸ್ಯರು ಪ್ರಶ್ನಿಸುತ್ತಿದ್ದಾರೆ.

ಅದರೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದವರು ಇದೀಗ ಚಿನ್ನಕ್ಕೆ ಹೋಲೋಮಾರ್ಕನ್ನು ಹಾಕುವ ಸ೦ಸ್ಥೆಯ ಪಾಲುದಾರರಾಗಿದ್ದಾರೆ ಎ೦ಬ ಹಾರಿಕೆಯ ಉತ್ತರವನ್ನು ನೀಡಿ ಮಾಡಿದ ತಪ್ಪಿನ ಅರಿವಿನಿ೦ದ ನೂಣುಚಿಕೊಳ್ಳುತ್ತಿದ್ದಾರೆ.

ಹಲವಾರು ಮ೦ದಿಗೆ ಪ೦ಗನಾಮವನ್ನು ಹಾಕಿದ ಈ ವ್ಯಕ್ತಿಯು ಇ೦ದು ಈ ಸ೦ಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ದೊಡ್ಡ ದುರ೦ತವೇ ಸರಿ ಎ೦ದು ಹಲವು ಮ೦ದಿ ಸದಸ್ಯರು ತಮ್ಮ ವಿರೋಧವನ್ನು ಹೊರಹಾಕಿದ್ದಾರೆ.

ಮತದಾನಕ್ಕೆ ಅವಕಾಶವನ್ನು ನೀಡದೇ ಎಲ್ಲವೂ ಗುಟ್ಟಾಗಿ ನಡೆಸಿರುವುದರ ಹಿ೦ದೆ ಕಾಣದ ಕೈಗಳ ಆಟ ನಡೆದಿದೆಯೋ ಅಥವಾ ಡೀಲ್ ನಡೆದಿದೆಯೋ ಎ೦ದು ಸದಸ್ಯರು ಆರೋಪಿಸಿದ್ದಾರೆ. ಸ೦ಸ್ಥೆಯು ಈ ಬಗ್ಗೆ ಎಲ್ಲವನ್ನುವಿವರಿಸಬೇಕಾಗಿದೆ.

ನೂರು ಮತವನ್ನು ಹೊ೦ದಿದ ವ್ಯಕ್ತಿ ಅಧ್ಯಕ್ಷನಾಗಲು ಸಮರ್ಥನೋ ಅಥವಾ ನೂರ ಇಪ್ಪತ್ತೈದು ಮತವನ್ನು ಹೊ೦ದಿದವನು ಸಮರ್ಥನೋ? ಹೆಚ್ಚು ಮತಇರುವವನು ಅಧ್ಯಕ್ಷನಾಗಲು ಅರ್ಹನಲ್ಲವೆ೦ಬುದು ಇದೀಗ ವಿವಾದಕ್ಕೆ ಕಾರಣವಾಗಿದೆ.

 

No Comments

Leave A Comment