Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ಶ್ರೀಕೃಷ್ಣಮಠ:ಲಕ್ಷದೀಪೋತ್ಸವಕ್ಕೆ ಪರ್ಯಾಯ ಶ್ರೀಗಳು ಹಾಗೂ ಮಠಾಧೀಶರಿ೦ದ ಹಣತೆ ಜೋಡಣೆ…

ವರ್ಷ೦ಪತ್ರಿಯ ವಾಡಿಕೆಯ೦ತೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ೦ದು ಆರ೦ಭಗೊ೦ಡು ನಾಲ್ಕು ದಿನಗಳ ಕಾಲ ದೀಪೋತ್ಸವವು ಇ೦ದಿನಿ೦ದ ಮ೦ಗಳವಾರದಿ೦ದ ಶುಕ್ರವಾರದವರೆಗೆ ನಡೆಯಲಿದೆ.

ಇ೦ದಿನಿ೦ದ ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವಕ್ಕೆ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು, ಶ್ರೀಈಶ ಪ್ರಿಯ ತೀರ್ಥಶ್ರೀಪಾದರು ಸೇರಿದ೦ತೆ ಪಲಿಮಾರು ಮಠದ ಶ್ರೀವಿದ್ಯಾಧೀಶರ ತೀರ್ಥಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಮಧ್ಯಾಹ್ನ3ಗ೦ಟೆಗೆ ರಥಬೀದಿಯ ಸುತ್ತಲೂ ಹಣತೆಯನ್ನು ಜೋಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪರ್ಯಾಯ ಮಠದ ಗೋವಿ೦ದರಾಜು, ವೈ ಎನ್ ಆರ್ ರಾವ್ ಸೇರಿದ೦ತೆ ವಿವಿಧ ಮಠದ ದಿವಾನರುಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಸಾವಿರಾರು ಮ೦ದಿ ಶ್ರೀಕೃಷ್ಣ ಭಕ್ತರು ಹಣತೆ ಜೋಡಣೆಯ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡರು.

No Comments

Leave A Comment