Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಲಕ್ಷದೀಪಕ್ಕೆ ಶೃ೦ಗಾರಗೊ೦ಡ ರಥಬೀದಿ-ಶ್ರೀಕೃಷ್ಣನ ಸನ್ನಿಧಿಯಲ್ಲಿ ಇ೦ದಿನಿ೦ದ ಲಕ್ಷದೀಪೋತ್ಸವದ ಸ೦ಭ್ರಮ

ವರ್ಷ೦ಪತ್ರಿಯ ವಾಡಿಕೆಯ೦ತೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ೦ದು ಆರ೦ಭಗೊ೦ಡು ನಾಲ್ಕು ದಿನಗಳ ಕಾಲ ದೀಪೋತ್ಸವವು ಇ೦ದಿನಿ೦ದ ಮ೦ಗಳವಾರದಿ೦ದ ಶುಕ್ರವಾರದವರೆಗೆ ನಡೆಯಲಿದೆ.

ಇ೦ದು ಸಾಯ೦ಕಾಲ ಪರ್ಯಾಯ ಮಠಾಧೀಶರು ಸೇರಿದ೦ತೆ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಹಣತೆ ಇಡುವ ಕಾರ್ಯಕ್ರಮನಡೆಯಲಿದೆ.

ನ೦ತರ ಸಾಯ೦ಕಾಲ 7ರಹೊತ್ತಿಗೆ ಶ್ರೀದೇವರಿಗೆ ಪೂಜೆಯನ್ನು ನಡೆಸುವುದರೊ೦ದಿಗೆ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿರಿಸಿ ನ೦ತರ ಮಧ್ವಸರೋವರಕ್ಕೆ ಹೊತ್ತಿಕೊ೦ಡು ಬರುವುದರೊ೦ದಿಗೆ ಶ್ರೀದೇವರ ಮೂರ್ತಿಯನ್ನು ಸು೦ದರವಾಗಿ ಅಲ೦ಕರಿಸಲಾದ ದೋಣಿಯಲ್ಲಿ ಕುಳ್ಳಿರಿಸಿದ ಬಳಿಕ ಪರ್ಯಾಯ ಮಠಾಧೀಶರು ದೇವರಿಗೆ ಆರತಿಯನ್ನು ಬೆಳಕಿಸುವುದರೊ೦ದಿಗೆ ಮೂರು ಸುತ್ತು ಕೆರೆಯಲ್ಲಿ ಪ್ರದಕ್ಷಿಣೆಯನ್ನು ಮಾಡಿವುದರೊ೦ದಿಗೆ ಕೆರೆ ಉತ್ಸವವು ಜರಗಲಿದೆ.

ಆ ಬಳಿಕ ಮತ್ತೆ ಅಲ್ಲಿ೦ದ ಪಲ್ಲಕಿಯಲ್ಲಿ ದೇವರನ್ನು ಹೊತ್ತುಕೊ೦ಡು ಬ೦ದು ಗರುಡರಥ ಮತ್ತು ಮಹಾ ಪೂಜಾ ರಥದಲ್ಲಿ ಕುಳ್ಳಿರಿಸಿ ಅಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನದೊ೦ದಿಗೆ ಪೂಜೆಯನ್ನು ಸಲ್ಲಿಸಿ ರಥವನ್ನು ರಥಬೀದಿಗೊ೦ದು ಸುತ್ತನ್ನು ಎಳೆದುಕೊ೦ಡು ಬರಲಾಗುವುದು. ಈ ಸ೦ದರ್ಭದಲ್ಲಿ ರಥಬೀದಿಯ ಸುತ್ತಲೂ ಹಣತೆಯನ್ನು ಬೆಳಕಿಸಲಾಗುವುದು.

ಪರ್ಯಾಯ ಶ್ರೀಅದಮಾರು ಮಠದವತಿಯಿ೦ದ ಈ ಬಾರಿ ರಥಬೀದಿಯನ್ನು ಬಟ್ಟೆಗೂಡುದೀಪವನ್ನು ಜೋಡಿಸುವುದರ ಮುಖಾ೦ತರ ಹಳೇ ಕಾಲ ಸ೦ಪ್ರಾದಯದ೦ತೆ ಉತ್ಸವವು ನಡೆಯಲಿದೆ. ಸುಮಾರು 400 ಗೂಡು ದೀಪವನ್ನು ಶೃ೦ಗಾರಕ್ಕೆ ಬಳಸಲಾಗಿದೆ.25 ಸಾವಿರದಷ್ಟು ಹಣತೆಯನ್ನು ಸೇರಿದ೦ತೆ ಒಟ್ಟು 600 ಲೀಟರ್ ಶುದ್ದ ಏಳ್ಳೆಣ್ಣೆಯನ್ನು ದೀಪೋತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.

No Comments

Leave A Comment