Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಕೆಲಸಕ್ಕೆಂದು ಹೇಳಿ ಹೋದ ಯುವತಿ ನಾಪತ್ತೆ

ಭಟ್ಕಳ: ಯುವತಿಯೋರ್ವಳು ಮನೆಯಿಂದ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ಮಂಕಿಯ ಯತ್ನಳ್ಳಿ, ಆಡುಕಾಲ್ ನಿವಾಸಿಯಾದ ತಾರಾ ನಾರಾಯಣ ಮರಾಠಿ (19) ನಾಪತ್ತೆಯಾಗಿರುವ ಯುವತಿ ಎಂದು ಗುರುತಿಸಲಾಗಿದೆ.

ಈಕೆ ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಅಲ್ಲಿಗೂ ಹೋಗದೇ ಈವರೆಗೂ ಮನೆಗೆ ವಾಪಸ್ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾಳೆ ಎನ್ನಲಾಗಿದೆ .

ಈ ಬಗ್ಗೆ ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

No Comments

Leave A Comment