Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ದೀಪಾವಳಿ ಪೂಜೆಗೆ ಉಪಯೋಗಿಸಿದ ಬಾಳೆ ಗಿಡ ಕೆರೆಗೆ ಎಸೆಯಲು ಹೋದ ಅಕ್ಕ-ತಂಗಿ ನೀರುಪಾಲು

ಬೆಳಗಾವಿ: ದೀಪಾವಳಿ ಹಬ್ಬದ ಪೂಜೆಗೆ ಉಪಯೋಗಿಸಿದ ಬಾಳೆ ಗಿಡ ಕೆರೆಗೆ ಎಸೆಯಲು ತೆರಳಿದ್ದ ಮೂವರು ಸಹೋದರಿಯರ ಪೈಕಿ, ಇಬ್ಬರು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ‌ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

ಸಾಂಬ್ರಾ ನಿವಾಸಿಗಳಾದ ನೇತ್ರಾ ಕೊಳವಿ (8) ಹಾಗು ಪ್ರಿಯಾ ಕೊಳವಿ (6) ‌ಮೃತ ಸಹೋದರಿಯರು ಎನ್ನಲಾಗಿದೆ. ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದ ಮತ್ತೋರ್ವ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಬಳಸಿದ ಪೂಜಾ ಸಾಮಗ್ರಿಗಳನ್ನು ಕೆರೆಗೆ ವಿಸರ್ಜಿಸಲು ಹಿರಿಯ ಸಹೋದರಿ 10 ವರ್ಷದ ಸಂಧ್ಯಾ ಜತೆಗೆ ಈ ಇಬ್ಬರು ತೆರಳಿದ್ದರು. ಬಾಳೆ ಗಿಡ ಕೆರೆಗೆ ಎಸೆಯುವ ವೇಳೆ ಸಂಧ್ಯಾ, ನೇತ್ರಾ, ಹಾಗು ಪ್ರಿಯಾ ಮೂವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸಂಧ್ಯಾಳನ್ನು ರಕ್ಷಿಸಿದ್ದಾರೆ. ಇನ್ನುಳಿದ ಇಬ್ಬರು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

No Comments

Leave A Comment