Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಕಾಪು: ಕಳತ್ತೂರಿನ ಯೋಧ ಹೃಯಾಘಾತದಿಂದ ಜಾರ್ಖಂಡ್‌‌ನಲ್ಲಿ ಮೃತ್ಯು

ಕಾಪು:ನ.7: ಕಾಪು ತಾಲೂಕು ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ ಕರ್ತವ್ಯ ನಿರತ ಸೇನಾ ಯೋಧ ನವೀನ್ ಕುಮಾರ್ ಕರ್ಕಡ (50) ಅವರು ಜಾರ್ಖಂಡ್ ನಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 29 ವರ್ಷಗಳಿಂದ ಸಿಐಎಸ್‌ಎಫ್ ಯೋಧನಾಗಿ ಸೇನಾ ಕರ್ತವ್ಯ ನಿರತರಾಗಿದ್ದ ಅವರು ಮುಂದಿನ ವರ್ಷದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು.

ಇನ್ನು ಜಾರ್ಖಂಡ್ ಸೇನಾ‌ ನೆಲೆಯಿಂದ, ಕೊಲ್ಕತ್ತಾ, ಮುಂಬಯಿ ಮಾರ್ಗದ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ತರಲಾಗುತ್ತಿದ್ದು, ಭಾನುವಾರ ಸಂಜೆ ಪಾದೂರು ಚರ್ಚ್ ನಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

No Comments

Leave A Comment