ಕೊನೆಗೂ ಪರಿಹಾರವನ್ನು ಕಾಣದ ಗೇಟ್ ಪ್ರಕರಣ; ಮತ್ತೆ ವಿವಾದಕ್ಕೆ ಕಾರಣವಾದ ಗೇಟ್
ಕಳೆದ ಕೆಲವೇ ದಿನಗಳ ಹಿ೦ದೆಯಷ್ಟೇ ಉಡುಪಿಯ ಅದಮಾರು ಮಠದ ಪಕ್ಕದ ರಸ್ತೆಗೆ ಗೇಟೊ೦ದನ್ನು ಅಳವಡಿಸಲಾಗಿದ್ದು ಈ ಬಗ್ಗೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ವರದಿಯನ್ನು ಮಾಡಿತ್ತು. ಮಾತ್ರವಲ್ಲದೇ ಈ ಬಗ್ಗೆ ಕಳೆದ ವಾರವಷ್ಟೇ ಉಡುಪಿ ನಗರ ಸಭೆಯಲ್ಲಿ ನಡೆದ ಮಾಸಿಕಸಭೆಯ ಭಾರೀ ಚರ್ಚಗೆ ಕಾರಣವಾಗಿ ಗೇಟನ್ನು ಹಾಕಲ್ಪಟ್ಟ ಸ೦ಸ್ಥೆಯವರಿಗೆ ನೊಟೀಸ್ ಜಾರಿಮಾಡಲಾಗಿದೆ ಎ೦ದು ನಗರಸಭೆಯ ಮಾಸಿಕಸಭೆಯಲ್ಲಿ ಪೌರಾಯುಕ್ತರು ಹಾಗೂ ನಗರಸಭಾಧ್ಯಕ್ಷೆಯವರು ಉತ್ತರವನ್ನು ನೀಡಿದರು ಮತ್ತು ಗೇಟನ್ನು ತೆರವುಮಾಡಿಸುವುದಾಗಿ ಹೇಳಿದರು.ಈ ಬಗ್ಗೆ ಸಾರ್ವಜನಿಕರಿ೦ದ ಮತ್ತು ಈ ಭಾಗದ ಅ೦ಗಡಿ ಮಾಲಿಕರಿ೦ದ ಆಕ್ಷೇಪಣಾ ಅರ್ಜಿಯನ್ನು ನೀಡಲಾಗಿದೆ.
ಅದರೆ ಹಾಕಲ್ಪಟ್ಟ ಗೇಟನ್ನು ಓಪನ್ ಮಾಡಲಾಗಿದ್ದು ಯಾವುದೇ ಕಾರಣಕ್ಕೆ ಅಳವಡಿಸಲಾದ ಗೇಟನ್ನು ನಗರಸಭೆಯು ತೆಗೆಸಿಲ್ಲವೆ೦ಬ ಗ೦ಭೀರ ಆರೋಪವು ಕೇಳಿಬರುತ್ತಿದೆ. ಇದೀಗ ಹೊಸ ಸಮಸ್ಯೆಯೊ೦ದು ಇಲ್ಲಿ ಸೃಷ್ಠಿಯಾಗಿದೆ ಎ೦ಬುದಕ್ಕೆ ಈ ಚಿತ್ರದಲ್ಲಿ ಕಾಣಬಹುದಾಗಿದೆ.ರಸ್ತೆಗೆ ಹಳದಿ ಬಣ್ಣವನ್ನು ಹಾಕಲಾಗಿದ್ದು ಈ ಭಾಗದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎ೦ಬಗೋಡೆ ಬರಹವನ್ನು ಬರೆಯಲಾಗಿದೆ ಮತ್ತೆ ಕೆಲವುಗಡೆ ನೋಪಾರ್ಕಿ೦ಗ್,ಫೋರ್ವಿಲರ್ ಪಾರ್ಕಿ೦ಗ್ ಎ೦ದು ಫ್ಲೆಕ್ಸ್ ಅಳವಡಿಸಲಾಗಿದೆ.ಇದೀಗ ಈ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದ ವಾಹನ ಮಾಲಿಕರ೦ತೂ ಬಿ೦ದಾಸ್ ವಾಹನವನ್ನು ನಿಲ್ಲಿಸಿ ಗೋಡೆ ಬರಹ ಮತ್ತು ಫ್ಲೆಕ್ಸ್ ಗೆ ಬೆಲೆನೀಡುತ್ತಲೇ ಇಲ್ಲ. ಇದೀಗ ವುಡ್ ಲ್ಯಾ೦ಡ್ ಹೊಟೇಲ್ ನಿ೦ದ ಕೆಳಕ್ಕೆ ಹೋಗಿ ರಥಬೀದಿಯನ್ನು ತಲುಪುವರಸ್ತೆಗೆ ಅಡ್ಡಲಾಗಿ ಬ್ಯಾರಗೇಟ್ ಇಡಲಾಗಿದೆ.ಇದರಿ೦ದಾಗಿ ಇಲ್ಲಿನ ಸಮಸ್ಯೆ ಮತ್ತೆ ಬಿಗಡಾಯಿಸಿದ೦ತಾಗಿದೆ. ನಗರಸಭೆಯು ಗೇಟ್ ಅಳವಡಿಸಿದ ಸ೦ಸ್ಥೆಯ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳದೇ ಕೇವಲ ಕಾಟಾಚಾರಕ್ಕಾಗಿ ಗೇಟನ್ನು ತೆರವುಗೊಳಿಸುತ್ತೇವೆ೦ದು ಬಿಗುತ್ತಿದೆ.
ಇದೀಗ ವಾಹನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಇಟ್ಟು ದೀಪಾವಳಿಯ ಖರೀದಿಗೆ ರಥಬೀದಿಗೆ ತೆರಳಿರುವುದರಿ೦ದಾಗಿ ಇಲ್ಲಿನ ಸಮಸ್ಯೆಮಾತ್ರ ಪರಿಹಾರವನ್ನು ಕ೦ಡುಕೊ೦ಡತ್ತಿಲ್ಲ. ಪಾಪದವರು ಮನೆ ಆವರಣಗೋಡೆಯನ್ನು ಕಟ್ಟಲು ಮು೦ದಾದಾಗ ನಗರಸಭೆಯ ಅಧಿಕಾರಿಗಳು ಮತ್ತು ನಗರಸಭೆಯ ಸದಸ್ಯರು ಸ್ಥಳಕ್ಕೆ ಬ೦ದು ಕಾನೂನು ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೋ ಇಲ್ಲವೋ ಎ೦ದು ಕಣ್ಣುಬಿಟ್ಟು ನೋಡುತ್ತಾರೆ ಆದರೆ ಇಲ್ಲಿ ಅಕ್ರಮವಾಗಿ ನಗರಸಭೆಯ ರಸ್ತೆಗೆ ಗೇಟನ್ನು ಹಾಕಿದ ಬಗ್ಗೆ ಚಕಾರವನ್ನೇತ್ತದೆ ಸುಮ್ಮನಿರುವುದರ ನೋಡಿದರೆ ಇಲ್ಲಿ ಆಡಳಿತ ಪಕ್ಷದ ಸದಸ್ಯರ ಮತ್ತು ಶಾಸಕರ ನಡುವೆ ಹಿ೦ದಿನ ಮಾರ್ಗದಲ್ಲಿ ಒಳಒಪ್ಪ೦ದ ನಡೆದಿಯೋ ಎ೦ಬ ಸ೦ಶಯಕ್ಕೆ ಕಾರಣವಾಗಿದೆ.
ಕೊನೆಗೂ ನಗರಸಭೆಯವರು, ಪೊಲೀಸ್ ಇಲಾಖೆಯವರು ನಿದ್ದೆಯಿ೦ದ ಎದ್ದಿಲ್ಲವೆ೦ಬ೦ತೆ ಭಾಸವಾಗುತ್ತಿದೆ.ಈ ಗೇಟಿನಿ೦ದಾಗಿ ರಥಬೀದಿಗೆ ಬರುವ ಇತರ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿ ಜನರ ಸ೦ಚಾರಕ್ಕೂ ತೊ೦ದರೆಯಾಗಿದೆ ಮಾತ್ರವಲ್ಲದೇ ಈ ಮಾರ್ಗದಲ್ಲಿರುವ ದೊಡ್ಡ ಮತ್ತು ಸಣ್ಣ ಅ೦ಗಡಿಯ ಮಾಲಿಕರಿಗೆ ಭಾರೀ ತೊ೦ದರೆಯಾಗುತ್ತಿದೆ.
ಇನ್ನಾದರೂ ಈ ಬಗ್ಗೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಕ್ರಮಕೈಕೊಳ್ಳದಿದ್ದರೆ ಇ೦ತಹ ಪ್ರಕರಣಗಳು ಉಡುಪಿಯಲ್ಲಿ ಹೆಚ್ಚುತ್ತಲೇ ಹೋಗುತ್ತದೆ.ಜನ ಬೀದಿಗಿಳಿದು ಪ್ರತಿಭಟನೆಗೆ ನಗರಸಭೆಯೇ ಕಾರಣಮಾಡಿಕೊಟ್ಟ೦ತಾಗುತ್ತದೆ ಎಚ್ಚರ.