Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ರಶಿಕಾ ಬಾರ್: ಬಿಯರ್ ಬಾಟಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ-ಆರೋಪಿಗಳ ಬ೦ಧನ

ಉಡುಪಿ: ಪಿರ್ಯಾದಿದಾರರಾದ ಮಹೇಶ. ಹೆಚ್. ಎನ್ (45), ತಂದೆ: ನರಸಿಂಹ ಆಚಾರ್ಯ, ವಾಸ: ವಿ.ಪಿ ಪ್ಯಾಲೇಸ್, ಗೋಪಾಲಪುರ, ಸಂತೆಕಟ್ಟೆ, ಅಂಚೆ, ಪುತ್ತೂರು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲ್ ನಲ್ಲಿರುವ ರಸಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಹಾರ ನಿರ್ವಹಿಸಿಕೊಂಡಿದ್ದು, ದಿನಾಂಕ 03/11/2021 ರಂದು 17:30 ಗಂಟೆಗೆ ಆರೋಪಿ ರಾಕೇಶ್ @ ರಾಕಿ ಎಂಬಾತ ಇತರ ಇಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಪಿರ್ಯಾದಿದಾರರನ್ನು ಹಾಗೂ ಅವರ ಕೆಲಸಗಾರರಾದ ವಾಲ್ಟರ್ ಡಿಸೋಜ, ಶರಣಪ್ಪ ಎಂಬುವವರಿಗೆ ಬಿಯರ್ ಬಾಟಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ.

ಪಿರ್ಯಾದಿದಾರರಿಗೆ ಬಲ ಹಣೆಗೆ, ವಾಲ್ಟರ್ ಡಿಸೋಜಾಗೆ ಬಲಕೈ ಮೂಳೆ ಮುರಿತ, ಶರಣಪ್ಪ ರವರಿಗೆ ಬಲಗೈ ಮೊಣಗಂಟಿಗೆ ಗಾಯವಾಗಿದ್ದು ಚಿಕಿತ್ಸೆಗೆ ಉಡುಪಿ ಗಾಂಧಿ ಆಸ್ಪತ್ರೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2021 ಕಲಂ: 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment