Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬಜೆಟ್ 2022-23: ಹಲವು ತೆರಿಗೆ ವಿನಾಯಿತಿಗಳಿಗೆ ಬ್ರೇಕ್ ಹಾಕಲು ಹಣಕಾಸು ಸಚಿವಾಲಯ ಚಿಂತನೆ; ವಿವರ ಹೀಗಿದೆ…

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ 2022-23 ರ ಬಜೆಟ್ ಗೆ ತಯಾರಿ ನಡೆಸುತ್ತಿದ್ದು, ವೈಯಕ್ತಿಕ ಹಾಗೂ ಕಾರ್ಪೊರೇಟ್ ನ ಹಲವು ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು ನೀಡಿದೆ.

ಯಾವುದನ್ನು ಮುಂದುವರೆಸಬೇಕು ಯಾವುದನ್ನು ಬಿಡಬೇಕು ಎಂಬ ನಿರ್ಧಾರವನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಸಚಿವಾಲಯ, ಆರ್ಥಿಕ ವೆಚ್ಚಗಳು ಹಾಗೂ ಉಪಯೋಗಗಳನ್ನು ಮೌಲ್ಯಮಾಪನ ಮಾಡಲು ಮುಂದಾಗಿದೆ.

ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ದರವನ್ನು ಕಡಿಮೆ ಮಾಡಿ ಹಾಗೂ ವಿನಾಯಿತಿಗಳನ್ನು ತೆಗೆದುಹಾಕುವ ಮೂಲಕ ತೆರಿಗೆ ಬೇಸ್ ನ್ನು ಹೆಚ್ಚಿಸುವ ಸರ್ಕಾರದ ಯೋಜನೆಯ ಭಾಗವಾಗಿ ಈ ಮೇಲಿನ ಕ್ರಮವನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಬಜೆಟ್ ನಲ್ಲಿ ಒಂದಷ್ಟು ವಿನಾಯಿತಿಗಳನ್ನು ಹಿಂಪಡೆಯಲಾಗಿತ್ತು. ಉಳಿದ ವಿನಾಯಿತಿಗಳನ್ನು ಈ ಬಾರಿ ಮರುಪರಿಶೀಲಿಸಲಾಗುತ್ತಿದೆ. ಕೆಲವು ತೆರಿಗೆ ವಿನಾಯಿತಿಗಳಿಗೆ ಈ ವರ್ಷ ಬ್ರೇಕ್ ಬೀಳಲಿದೆ ಅಥವಾ ಅವುಗಳನ್ನು ಮುಂದುವರೆಸಲು ಹೋಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆದರೆ ನಿರ್ದಿಷ್ಟ ಯೋಜನೆಗಳ ಹೆಸರನ್ನು ಬಹಿರಂಗಪಡಿಸುವುದಕ್ಕೆ ಆ ಅಧಿಕಾರಿ ನಿರಾಕರಿಸಿದ್ದು, ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ನೀಡಲಾಗುತ್ತಿರುವ ಬಂಡವಾಳ ಲಾಭ ತೆರಿಗೆ ವಿನಾಯಿತಿ ಮಾ.2022ಕ್ಕೆ ಅಂತ್ಯಗೊಳ್ಳಲಿದ್ದು ಇದನ್ನು ವಿಸ್ತರಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ರಫ್ತು ಆಧಾರಿತ ಘಟಕಗಳಿಗೂ ಇದೇ ಅನ್ವಯವಾಗಲಿದೆ

ಇದೇ ವೇಳೆ ಕೈಗಾರಿಕೋದ್ಯಮಿಗಳಿಂದ ಈ ಬಾರಿಯ ಬಜೆಟ್ ಗೆ ಸಲಹೆಗಳನ್ನು ಕೇಳಿರುವ ಹಣಕಾಸು ಸಚಿವಾಲಯ, ಶಿಫಾರಸ್ಸುಗಳನ್ನು ಆರ್ಥಿಕ ಸಮರ್ಥನೆಯೊಂದಿಗೆ ಬೆಂಬಲಿಸಬೇಕೆಂದು ಒತ್ತಾಯಿಸಿದೆ.

No Comments

Leave A Comment