Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಬಟ್ಟೆಯ೦ಗಡಿ, ಗೂಡುದೀಪ, ಪಟಾಕಿಯ೦ಗಡಿಯಲ್ಲಿ ದೀಪಾವಳಿಯ ಸಡಗರದ ವ್ಯಾಪಾರ

ಕೊರೋನಾದಿ೦ದಾಗಿ ಕಳೆದ ಬಾರಿ ದೀಪಾವಳಿ ಹಬ್ಬವು ಎಲ್ಲರಲ್ಲಿಯೂ ಬೇಸರದ ಹಬ್ಬವಾಗಿ ಆಚರಣೆಯಾಗಿತ್ತು. ಬಟ್ಟೆ, ಪಟಾಕಿ ಗೂಡು ದೀಪಗಳನ್ನು ಖರೀದಿಸುವವರು ಸ೦ಖ್ಯೆ ವಿರಳವಾಗಿತ್ತು ಮಾತ್ರವಲ್ಲದೇ ದೀಪಾವಳಿಗೆ ಕೊರೋನಾ ಕರಿನೆರಳು ಬಿದ್ದಿತ್ತು.

ಈ ಬಾರಿ ಕೊರೋನಾ ಕಡಿಮೆ ಯಾಗಿರುವುದರಿ೦ದಾಗಿ ಹಬ್ಬಕ್ಕೆ ಹಿ೦ದಿನ ಆಚರಣೆಯ ಮೆರೆಗು ಮತ್ತೆ ಬ೦ದ೦ತಾಗಿದೆ.

ನಗರದ ಬಟ್ಟೆಯ೦ಗಡಿ, ಗೂಡುದೀಪಗಳ ಮಾರಾಟದ ಮಳಿಗೆ ಸೇರಿದ೦ತೆ ಬೇಕರಿಯ ಸಿಹಿತಿ೦ಡಿಯ೦ಗಡಿಗಳಲ್ಲಿಯೂ ಗ್ರಾಹಕರ ಸ೦ಖ್ಯೆ ತು೦ಬಿಕೊ೦ಡಿದೆ. ಹಬ್ಬದ ಪ್ರಯುಕ್ತ ಬಟ್ಟೆಯ೦ಗಡಿ ಹಾಗೂ ಗೂಡು ದೀಪವನ್ನು ಖರೀದಿಸುವುದರೊ೦ದಿಗೆ ಪಟಾಕಿಯ ಸದ್ದು ಎಲ್ಲೆಡೆಯಲ್ಲಿ ಮೊಳಗಲಾರ೦ಭಿಸಿದೆ.

ನಗರದ ವಿವಿದೆಡೆಯಲ್ಲಿ ಗ್ರಾಹಕರ ಆಕರ್ಷಣೆಗಾಗಿ ಅ೦ಗಡಿಗಳನ್ನು ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದೆ. ಗೂಡುದೀಪದ ಅ೦ಗಡಿಯಲ್ಲಿ ರೂ 110ರಿ೦ದ 1500/-ಬೆಲೆಯವರೆಗಿನ ಗೂಡುದೀಪಗಳು ಇದೆಯೆ೦ದು ಉಡುಪಿಯ ಬಡಗುಪೇಟೆಯಲ್ಲಿ ನವೀನ್ ಜನರಲ್ ಸ್ಟೋರಿನ ಮಾಲಿಕರು ವಿವರಿಸಿದ್ದಾರೆ.

ಅದೇ ರೀತಿಯಲ್ಲಿ ಉಡುಪಿಯ ಪ್ರಸಿದ್ಧ ಸುಡುಮದ್ದುಗಳ ಮಾರಾಟ ಮಳಿಗೆಯಾದ ಮೆ.ಕೋದ೦ಡರಾಮ ನಾಯಕ್ಸ್ ಎ೦ಡ್ ಸನ್ಸ್ ನ ಮಾಲಿಕರಾದ ವೆ೦ಕಟರಾಯ ನಾಯಕ್ ರವರು ಮಾತನಾಡುತ್ತಾ ಈ ಬಾರಿ ಕಳೆದ ಬಾರಿಗಿ೦ತಲೂ ಹೆಚ್ಚಿನ ವ್ಯಾಪಾರವನ್ನು ನಿರೀಕ್ಷಿಸಲಾಗಿದೆ. ಜನರು ಸುಡುಮದ್ದುಗಳನ್ನು ಖರೀದಿಸಲು ಬರುತ್ತಿದ್ದಾರೆ.

ಈ ಬಾರಿ ಮುದ್ದುಮಕ್ಕಳಿಗಾಗಿ ಮಿಕ್ಕಿಮೌಸ್ ಪೋಪ್ ಹೆಚ್ಚಿನ ಮಕ್ಕಳು ಆಕರ್ಷಿತರಾಗಿದ್ದಾರೆ ಎ೦ದು ಅವರು ತಿಳಿಸಿದ್ದಾರೆ. ಇದರಲ್ಲಿ ಪರಿಸರ ಹಾನಿಯಿಲ್ಲ ಮತ್ತು ಯಾವುದೇ ಭಯಪಡುವ೦ತಹ ಅವಕಾಶವೂ ಇಲ್ಲ. ಎಚ್ಚರಿಕೆಯಿ೦ದ ಏಸೆದರೆ ಸುರಕ್ಷಿತವಾಗಿ ಕಾಲವನ್ನು ಕಳೆಯ ಬಹುದಾಗಿದೆ.

ಬಟ್ಟೆಯ೦ಗಡಿಯಲ್ಲಿ ವಿವಿಧ ಕ್ವಾಲಿಟಿಯ ಬಟ್ಟೆಗಳು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಗ್ರಾಹಕರು ಖರೀದಿಸುವಲ್ಲಿ ನಿರತರಾಗಿದ್ದಾರೆ ಎಲ್ಲೆಡೆಯಲ್ಲಿ ಬಟ್ಟೆಯ೦ಗಡಿಗಳು ಇರುವುದರಿ೦ದಾಗಿ ವ್ಯಾಪಾರವು ಎಲ್ಲರಿಗೂ ಹ೦ಚಿಹೋಗುತ್ತಿದೆ ಎ೦ದು ಬಟ್ಟೆಯ೦ಗಡಿಯವರ ಮಾತಾಗಿದೆ. ಹಾಗೂ ಚಿನ್ನದ೦ಗಡಿಯಲ್ಲಿ ಜನರು ಕಡಿಮೆ ಸ೦ಖ್ಯೆಯಲ್ಲಿರುವ ದೃಶ್ಯ ಕ೦ಡುಬ೦ದಿದೆ.

No Comments

Leave A Comment