Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕಾರ್ಕಳ: ಆಗುಂಬೆಯಲ್ಲಿ ಭೀಕರ ಅಪಘಾತ – ಮಿಯ್ಯಾರು ಮೂಲದ ನಾಲ್ವರು ಸಾವು, ಐವರು ಗಂಭೀರ

ಕಾರ್ಕಳ:ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ ಘಟನೆ ಅ.29 ರ ಶುಕ್ರವಾರ ವರದಿಯಾಗಿದೆ.ಆಗುಂಬೆ ಘಾಟಿಯ ಕಂದಕಕ್ಕೆ ಈಚರ್ ವಾಹನ ಉರುಳಿ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು ಈಚರ್ ಚಾಲಕ ಯಜ್ಞೇಶ್ ಹಾಗೂ ಈಚರ್ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವತಿಕೆರೆ ಬಳಿಯ ಮಹಾವೀರಭವನ ಪಕ್ಕದ ನಿವಾಸಿ ಶ್ರೀಜಿತ್ (21) ಜೋಡುಕಟ್ಟೆ ನಿವಾಸಿ ಮಂಜುನಾಥ (35), ಮಣಿ(28) ಎಂದು ಗುರುತಿಸಲಾಗಿದೆ.

ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ . ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 9ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ.

 

No Comments

Leave A Comment