Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉತ್ತರ ಪ್ರದೇಶ: ಚೇಷ್ಟೆ ಮಾಡಿದ್ದಕ್ಕೆ ವಿದ್ಯಾರ್ಥಿಯನ್ನು ತಲೆಕೆಳಗೆ ಮಾಡಿ ನೇತಾಡಿಸಿದ ಪ್ರಾಂಶುಪಾಲ!

ಲಖನೌ: ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಕಟ್ಟಡದ ಮೊದಲ ಮಹಡಿಯಲ್ಲಿ ವಿದ್ಯಾರ್ಥಿಯೋರ್ವನ ಕಾಲನ್ನು ಮೇಲಕ್ಕೆ ಎತ್ತಿ ತೆಲೆಕೆಳಗೆ ಮಾಡಿ, ನೇತಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್​ ಆಗುತ್ತಿದ್ದಂತೆ ಉತ್ತರ ಪ್ರದೇಶದ ಮಿರ್ಜಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದ್ದಾರೆ. ಎರಡನೇ ತರಗತಿ ಮಗು ಚೇಷ್ಟೆ ಮಾಡಿದ್ದಕ್ಕೆ ಅಕ್ಟೋಬರ್ 28ರಂದು ಪ್ರಾಂಶುಪಾಲರು ಈ ಶಿಕ್ಷೆಯನ್ನು ವಿಧಿಸಿದ್ದಾರೆ.

ಅಹ್ರೌರಾದ ಸದ್ಭಾವನಾ ಶಿಕ್ಷಣ ಸಂಸ್ಥಾನ ಜೂನಿಯರ್ ಹೈಸ್ಕೂಲ್ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಅವರು 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಊಟ ಮಾಡುವಾಗ ಇತರ ಮಕ್ಕಳೊಂದಿಗೆ ಕೀಟಲೆ ಮಾಡಿದ್ದಕ್ಕೆ ಕೋಪಗೊಂಡಿದ್ದಾರೆ. ಬಳಿಕ ಮಗುವಿನ ಒಂದು ಕಾಲನ್ನು ಮೇಲಕ್ಕೆ ಎತ್ತಿ ತೆಲೆಕೆಳಗಾಗಿ ಮಾಡಿ ಮಗುವಿಗೆ ಬುದ್ಧಿಯನ್ನು ಹೇಳಿದ್ದಾರೆ.

No Comments

Leave A Comment