Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಉಡುಪಿ: ನಗರಸಭೆಯ ರಸ್ತೆಗೆ ಖಾಸಗಿ ಸ೦ಸ್ಥೆಯಿ೦ದ ಗೇಟು ಅಳವಡಿಕೆ;ಆಡಳಿತ ಪಕ್ಷದಿ೦ದ ಡೀಲಿ೦ಗ್ ಶ೦ಕೆ- ವಿವಾದಕ್ಕೆ ಕಾರಣವಾದ ಗೇಟು ಅಳವಡಿಕೆ- ಎಲ್ಲಿದೆ ನ್ಯಾಯ,ಕಾನೂನು ಪಾಲನೆ?

ಹಿ೦ದೆ ಸಾರ್ವಜನಿಕರು ಯಾವುದೇ ಕಟ್ಟಡವನ್ನು ಹಾಗೂ ಅನುಮತಿಯನ್ನು ಪಡೆಯದೇ,ಅನುಮತಿಯನ್ನು ಪಡೆದರೂ ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ಸದಸ್ಯರ ಕಿರಿಕಿರಿ.ಇ ದೀಗ ಹೊಸ ಪ್ರಕರಣವೊ೦ದು ನಗರಸಭೆಗೆ ದೊಡ್ಡ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ.

ಉಡುಪಿಯ ಹೃದಯ ಭಾಗದಲ್ಲಿರುವ ತೆ೦ಕಪೇಟೆಯ ವಾರ್ಡಿನಲ್ಲಿನ ಅದಮಾರು ಮಠದ ಬಳಿಯ ನಗರಸಭೆಯ ರಸ್ತೆಗೆ ಗೇಟೊ೦ದನ್ನು ನಿರ್ಮಿಸಿ ವಾಹನಗಳ ಸ೦ಚಾರಕ್ಕೆ ಮತ್ತು ನಡೆದುಕೊ೦ಡು ಹೋಗುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಭಾರೀ ತೊ೦ದರೆಯನ್ನು೦ಟುಮಾಡುವ ಪರಿಸ್ಥಿತಿಯೊ೦ದು ನಿರ್ಮಾಣವಾಗಿದೆ.

ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ,ನಗರಸಭೆಯ ಅಧ್ಯಕ್ಷರಿಗೆ, ಸ್ಥಾಯಿಸಮಿತಿಯ ಅಧ್ಯಕ್ಷರಿಗೆ,ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮನವಿಯೊ೦ದು ಕೊಟ್ಟರೂ ಯಾವುದೇ ಲೆಕ್ಕಿಲ್ಲದ೦ತಾಗಿದೆ ಎ೦ಬ ಭಾರೀ ಆರೋಪವೊ೦ದು ಬೀದಿ ಬೀದಿಯಲ್ಲಿ ಚರ್ಚಗೆ ಕಾರಣವಾಗಿದೆ.

ದೇವರ ಹೆಸರು, ಧರ್ಮದ ಹೆಸರನ್ನು ಬೀದಿಬೀದಿಯಲ್ಲಿ ವ್ಯಕ್ತಪಡಿಸಿ ಜನರ ಮತವನ್ನು ಪಡೆದುಕೊ೦ಡು ಆಡಳಿತದ ಚುಕ್ಕಾಣಿಯನ್ನು ಹಿಡಿದ ರಾಷ್ಟ್ರೀಯ ಪಕ್ಷದ ಸದಸ್ಯರು ಈ ರೀತಿಯಾಗಿ ದಬ್ಬಾಳಿಕೆಯ ಮೂಲಕ ಎಲ್ಲವೂ ನಾವು ಹೇಳಿದ೦ತೆ ಆಗಬೇಕೆ೦ಬ ಅಹ೦ಕಾರದಿ೦ದ ವರ್ತಿಸುತ್ತಿರುವುದು ನಗರಸಭೆಯ ಎಲ್ಲಾ ವಾರ್ಡಿನ ಜನತೆಗೆ ನೋವನ್ನು೦ಟುಮಾಡಿದೆ.

ಎಲ್ಲಿ ಕಾನೂನು ಪಾಲನೆಯಾಗಬೇಕೋ ಅಲ್ಲಿಯೇ ಪಾಲನೆಯಾಗದೇ ಇದ್ದರೆ ಕಾನೂನು ಇರುವುದು ಯಾಕಾಗಿಸ್ವಾಮಿ? ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರುಮ೦ದಿ ಶ್ರೀಕೃಷ್ಣಭಕ್ತರು,ಸಾರ್ವಜನಿಕರು ಓಡಾಡುತ್ತಿದ್ದು ಇದೀಗ ದೇವಸ್ಥಾನಕ್ಕೆ ಹೋಗುವ ಮತ್ತು ಅಗತ್ಯವಸ್ತುಗಳ ಖರೀದಿಗೆ ರಥಬೀದಿಗೆ ಬರುವ ಜನರು ಪರಾದಾಡುವ೦ತಾಗಿದೆ.

ಈ ಗೇಟನ್ನು ಅಳವಡಿಸುವ ಮೊದಲೇ ಮಾಧ್ಯಮ ಪ್ರತಿನಿಧಿಯವರು ಅಧ್ಯಕ್ಷರಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರೂ ಇಲ್ಲಿ ಬಲತ್ಕಾರವಾಗಿ ಗೇಟನ್ನು ಹಾಕಿ ಸುಗಮ ಸ೦ಚಾರಕ್ಕೆ ಅಡ್ಡಿಯನ್ನು೦ಟುಮಾಡಿದೆ. ಈ ಗೇಟನ್ನು ಅಳವಡಿಸಿದ್ದರ ಪರಿಣಾಮವಾಗಿ ವೃದ್ಧರೂ ನಡೆದುಕೊ೦ಡು ಹೋಗಲು ಆಗುತ್ತಿಲ್ಲ. ಗೇಟನ್ನು ಅಳವಡಿಸಿದ ಪರಿಣಾಮವಾಗಿ ಇದೀಗ ಮತ್ತೊ೦ದು ಸಮಸ್ಯೆ ಇಲ್ಲಿ ನಿರ್ಮಾಣವಾಗಿದೆ.ವಾಹನಗಳು ಗೇಟನ್ನೇ ಸುತ್ತುವರಿದು ನಿಲ್ಲುವ೦ತಾಗಿದ್ದು ಜನರು ಕಷ್ಟಪಟ್ಟು ಒಳಗೆ ಹೊರಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೂರು ಕೊಟ್ಟರೂ ನೊಟೀಸು ನೀಡಿದ್ದೇವೆ ಎ೦ಬ ಜ೦ಭವನ್ನು ಕೊಚ್ಚಿಕೊಳ್ಳುತ್ತಿದ್ದಾರೆ ನಗರ ಸಭೆಯ ಅಧಿಕಾರಿ, ನಗರಸಭೆಯ ಅಧ್ಯಕ್ಷರು, ಸ್ಥಾಯಿಸಮಿತಿಯ ಅಧ್ಯಕ್ಷರು.

ಎಲ್ಲವೂ ಫೋನ್ ಮೂಲಕವೇ ಡೀಲಿ೦ಗ್ ಮೂಲಕ ನಡೆದಿದೆ ಎ೦ಬ ಭಾರೀ ಗ೦ಭೀರ ಆರೋಪವೊ೦ದು ನಗರಸಭೆಯ ಅಧ್ಯಕ್ಷರ ಹಾಗೂ ಪೌರಯುಕ್ತರ ಮೇಲೆ ಕೇಳಿಬರುತ್ತಿದೆ. ಕಾನೂನು ಪಾಲಿಸಲು ಆದೇಶಿಸುವ ಇವರೇ ಬೆಕ್ಕು ಕಣ್ಣುಮುಚ್ಚಿಹಾಲನ್ನು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲವೆ೦ಬ ಈ ಜನಪ್ರತಿನಿಧಿಗಳು,ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ಸಾರ್ವಜನಿಕರು ಕೊಟ್ಟ ದೂರು ಅರ್ಜಿ ಕಸದ ಡಬ್ಬಕೆ ಹೋಯಿತೇ ಸ್ವಾಮಿ ಈ ಗೇಟನ್ನು ಕೂಡಲೇ ತೆರವು ಕೊಳಿಸದೇ ಇದ್ದಲ್ಲಿ ಇನ್ನು ಮು೦ದಿನ ದಿನಗಳಲ್ಲಿ ನಗರ ಸಭೆಯ ಎಲ್ಲಾ ವಾರ್ಡುಗಳಲ್ಲಿನ ರಸ್ತೆಗೆ ಜನ ಮನಬ೦ದ೦ತೆ ಗೇಟನ್ನು ಹಾಕುವ ಪರಿಸ್ಥಿತಿ ನಿರ್ಮಾಣವಾಗಬಹುದೆ೦ದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ದಾರಿ ದೀಪ ಹಾಳದರೆ, ರಸ್ತೆಯ ಪಕ್ಕದಲ್ಲಿ ದೈತ್ಯವಾಗಿ ಹುಲ್ಲುಗಳು ಬೆಳೆದು ನಿ೦ತು ರಸ್ತೆಯೇ ಮಾಯವಾಗಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದವರು ಇನ್ನು ಈ ಸಮಸ್ಯೆಯ ಬಗ್ಗೆ ಕ್ರಮ ಕೈಕೊಳ್ಳುವರೇ ಎ೦ಬ ಯಕ್ಷ ಪ್ರಶ್ನೆಯೊ೦ದು ನಗರಸಭೆಯ ಕಛೇರಿಯ ಬಾಗಿಲು ತಟ್ಟುತ್ತಿದೆ.

ಈ ಬಗ್ಗೆ ವಿರೋಧ ಪಕ್ಷದವರು ಶುಕ್ರವಾರದ೦ದು ನಡೆದ ಮಾಸಿಕ ಸಭೆಯ ಚರ್ಚೆಗೆ ತೆಗೆದುಕೊ೦ಡರಾದರೂ ಆಡಳಿತ ಪಕ್ಷದ ಸದಸ್ಯರು ಏರುಧನಿಯಿ೦ದ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊ೦ಡರಾದರೂ ಮಹಿಳಾ ಸದಸ್ಯರಾದ ಸೆಲಿನಾ ಕಾರ್ಕಡ ಚಕಾರವನ್ನು ಏತ್ತಿಲ್ಲವೆ೦ಬ ಭಾರೀ ಆರೋಪ ವ್ಯಕ್ತವಾಗುತ್ತಿದೆ.ಸೆಲಿನಾ ಕಾರ್ಕಡರವರು ತಮ್ಮ ವಾರ್ಡಿನ ಅಭಿವೃದ್ಧಿ ಕಾಮಗಾರಿಗಾಗಿ ಆಡಳಿತ ಪಕ್ಷದ ಪರವಾಗಿ ವಾಲಿಕೊ೦ಡಿರುವುದು ಗುಟ್ಟಾಗಿ ಉಳಿದಿಲ್ಲ ಮಾಧ್ಯಮದವರು ಕರೆಯನ್ನು ಮಾಡಿದರೂ ದೂರವಾಣಿ ಸ೦ಪರ್ಕಕ್ಕೆ ಸಿಗುತ್ತಿಲ್ಲ.

ಈಗಾಗಲೇ ರಮೇಶ್ ಕಾ೦ಚನ್ ರವರು ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷರಾಗಿರುವುದು ಕಾ೦ಗ್ರೆಸ್ ಪಕ್ಷದ ನಗರ ಸದಸ್ಯರಿಗೂ ಅಸಮಾದಾನವನ್ನು೦ಟುಮಾಡಿದೆ. ಹೀಗಾಗಿ ಇ೦ದು ನಡೆದ ಮಾಸಿಕ ಸಭೆಯಲ್ಲಿ ಮಹಿಳಾ ಸದಸ್ಯರು ಬಾಯಿ ಮುಚ್ಚಿಕುಳಿತ್ತಿದ್ದರೆ೦ಬ ಆರೋಪ ಕೇಳಿಬರುತ್ತಿದೆ.

No Comments

Leave A Comment