ಜಮ್ಮು ಕಾಶ್ಮೀರದ ಡೋಡಾದಲ್ಲಿ ಕಣಿವೆಗೆ ಉರುಳಿ ಬಿದ್ದ ಮಿನಿ ಬಸ್: 8 ಮಂದಿ ಸಾವು, ಹಲವರಿಗೆ ಗಾಯ
ಡೋಡಾ: ಜಮ್ಮು ಮತ್ತು ಕಾಶ್ಮೀರದ ಥಾತ್ರಿ-ಡೋಡಾ ರಸ್ತೆಯ ಸುಯಿ ಗೋವಾರಿ ಬಳಿ ಮಿನಿ ಬಸ್ ಕಣಿವೆಗೆ ಉರುಳಿದ ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಏನು ಕಾರಣ ಎಂಬುದು ಸದ್ಯ ಗೊತ್ತಾಗಿಲ್ಲ. ಬಸ್ ಥಾತ್ರಿಯಿಂದ ಡೋಡಾಗೆ ತೆರಳುತ್ತಿತ್ತು. ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಚೆನಾಬ್ ನದಿಯ ದಡದಲ್ಲಿನ ಹೊಲಗಳಲ್ಲಿ ಮಗುಚಿ ಬಿದ್ದ ವಾಹನದಿಂದ ಜನರನ್ನು ಹೊರ ತೆಗೆದಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಥಾತ್ರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಾಣ ಕಳೆದುಕೊಂಡವರ ಬಂಧುಗಳಿಗೆ PMNRF ನಿಂದ ತಲಾ 2 ಲಕ್ಷ ನೀಡಲಾಗುವುದು, ಗಾಯಗೊಂಡವರಿಗೆ ರೂ. 50,000 ಎಂದು ಪ್ರಧಾನಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಡೋಡಾದ ಥಾತ್ರಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದೀಗ ಡಿ.ಸಿ.ದೊಡಾ ವಿಕಾಸ್ ಶರ್ಮಾ ಅವರೊಂದಿಗೆ ಮಾತನಾಡಿದ್ದು ಗಾಯಗೊಂಡವರನ್ನು ಜಿಎಂಸಿ ಡೋಡಾಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.