Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪ: ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ವಿಚಾರಣೆಗೆ ಎನ್ ಸಿಬಿ ಆದೇಶ

ಮುಂಬೈ: ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಿಟ್ಟುಕಳಿಸುವುದಕ್ಕೆ 25 ಕೋಟಿ ರೂಪಾಯಿ ಸುಲಿಗೆ (ಲಂಚ)ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ನ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ.

ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ (ಎನ್ ಸಿಬಿ)  ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪ ಕೇಳಿಬಂದಿತ್ತು.

ಎನ್ ಸಿಬಿಯ ಪ್ರಧಾನ ಉಪನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ (ಸಿವಿಒ) ಆಗಿರುವ ಗ್ಯಾನೇಶ್ವರ್ ಸಿಂಗ್ ಅವರು ತನಿಖೆ ನಡೆಸಲಿದ್ದಾರೆ.

ಪ್ರಭಾಕರ್ ಸೈಲ್ ಎಂಬಾತ ಕ್ರೂಸ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು,  ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆರ್ಯನ್ ಖಾನ್ ನ್ನು ಈ ಪ್ರಕರಣದಿಂದ ಕೈಬಿಡಲು ಎನ್ ಸಿಬಿ ಅಧಿಕಾರಿ ಹಾಗೂ ಇತರರು 25 ಕೋಟಿ ರೂಪಾಯಿ ಕೇಳಿದ್ದರು ಎಂಬ ಗಂಭೀರ ಆರೋಪವನ್ನು ಅ.24 ರಂದು ಮಾಡಿದ್ದರು.

ಸೈಲ್ ತಾನು ಈ ಪ್ರಕರಣದ ಮತ್ತೋರ್ವ ಸಾಕ್ಷಿದಾರ ಹಾಗೂ ಎನ್ ಸಿಬಿ ರೈಡ್ ನಂತರ ಕಣ್ಮರೆಯಾಗಿರುವ ಕೆಪಿ ಗೋಸಾವಿಗೆ ಬಾಡಿ ಗಾರ್ಡ್ ಎಂದೂ ಹೇಳಿಕೊಂಡಿದ್ದಾನೆ.

ಗೋಸಾವಿ ಶಾ ರೂಖ್ ಖಾನ್ ಅವರ ಮ್ಯಾನೇಜರ್ ನ್ನು ಭೇಟಿ ಮಾಡಿ ವಾಂಖೆಡೆ ಅವರ ಸಮ್ಮುಖದಲ್ಲಿ 9-10 ಬ್ಲಾಂಕ್ ಚೆಕ್ ಗಳಿಗೆ ಸಹಿ ಹಾಕಲು ಕೇಳುತ್ತಿದ್ದನ್ನು ತಾನು ನೋಡಿದ್ದೇನೆ ಎಂದು ಸೈಲ್ ಆರೋಪಿಸಿದ್ದಾರೆ.

ಈ ಆರೋಪದ ಬಗ್ಗೆ ಪ್ರಮಾಣಪತ್ರ ಹಾಗೂ ವರದಿಯನ್ನು ನಮ್ಮ ಡಿಡಿಜಿ (ವಾಯುವ್ಯ) ಅಧಿಕಾರಿಯಿಂದ ಪಡೆದಿದ್ದೇವೆ. ಎನ್ ಸಿಬಿ ನಿರ್ದೇಶಕರು ಈ ಆರೋಪವನ್ನು ಗಮನಿಸಿದ್ದು, ವಿಜಿಲೆನ್ಸ್ ವಿಭಾಗಕ್ಕೆ ತನಿಖೆಗಾಗಿ ಕಳಿಸಿದ್ದಾರೆ. ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಯಾವುದೇ ಸಿಬ್ಬಂದಿಗಳ ವಿರುದ್ಧ ಯಾವುದೇ ಆರೋಪ ಬಂದರೂ ತನಿಖೆಗೆ ನಾವು ಮುಕ್ತರಾಗಿದ್ದೇವೆ”  ಎಂದು ಗ್ಯಾನೇಶ್ವರ್ ಸಿಂಗ್ ಹೇಳಿದ್ದಾರೆ.

No Comments

Leave A Comment