ಅಕ್ಷರ ಪುರುಷೋತ್ತಮ ಸಿದ್ಧಾಂತದ ಪ್ರಸ್ಥಾನತ್ರಯ ಭಾಷ್ಯ ಶ್ರೀಕೃಷ್ಣನಿಗೆ ಸಮರ್ಪಣೆ…
ಉಡುಪಿ: ಶ್ರೀಕೃಷ್ಣ ಮಠಕ್ಕೆ,ಗುಜರಾತಿನ ಸ್ವಾಮಿನಾರಾಯಣ ಪಂಥದ ಸಾಧು ಶ್ರೀಭದ್ರೇಶದಾಸ ಸ್ವಾಮೀಜಿಯವರು ತಮ್ಮ ಶಿಷ್ಯರೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅವರಿಗೆ ದೇವರ ದರ್ಶನ ಮಾಡಿಸಿದರು.
ಅಕ್ಷರ ಪುರುಷೋತ್ತಮ ಸಿದ್ಧಾಂತದ ಪ್ರಸ್ಥಾನತ್ರಯ ಭಾಷ್ಯವನ್ನು ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಮರ್ಪಿಸಿದರು.
ನಂತರ ಅವರನ್ನು ರಾಜಾಂಗಣದ ಸಭೆಯಲ್ಲಿ ಗೌರವಿಸಲಾಯಿತು.ವಿದ್ವಾನ್ ಆನಂದತೀರ್ಥ ನಾಗಸಂಪಿಗೆಯವರು ಸ್ವಾಗತಿಸಿದರು. ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.