Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ: ದೇವಾಲಯ ಸಂರಕ್ಷಣಾ ಮಸೂದೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

ಇದರಿಂದಾಗಿ ದೇವಾಲಯಗಳನ್ನು ಹಠಾತ್ತನೆ ನೆಲಸಮ ಮಾಡುವ ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ, ಈ ಮಸೂದೆಯನ್ನು ಅಂಗೀಕರಿಸಿ ನಂತರ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು. ಈಗ ದೇವಾಲಯಗಳ ಸ್ವರೂಪ ಸಂರಕ್ಷಣಾ ಮಸೂದೆ ಜಾರಿಗೆ ಈಗ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೈಸೂರಿನ ನಂಜನಗೂಡು ಬಳಿ ದೇವಾಲಯವನ್ನು ಹಠಾತ್ತನೆ ನೆಲಸಮ ಮಾಡಿದ್ದ ವಿಚಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಾರಿ ಕೋಲಾಹಲದ ಚರ್ಚೆಗೆ ಗ್ರಾಸವಾಗಿತ್ತು. ಅಂತರ ನಂತರ ನೆಲಸಮಗೊಂಡ ಜಾಗದಲ್ಲಿ ದೇವಾಲಯ ನಿರ್ಮಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅಧಿಕಾರಿಗಳ ಉದ್ಧಟತನದಿಂದ ಇಂತಹ ದ ಘಟನೆಗಳು ಮುಂದೆ ನಡೆಯದಂತೆ ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣೆ ಮಾಡುವ ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರ ಮಂಡನೆ ಮಾಡಿತ್ತು ನಂತರ ಅಂಗೀಕರಿಸಿತ್ತು .

ರ ಈ ವಿಚಾರ ಆಡಳಿತರೂಢ ಬಿಜೆಪಿಗೆ ತುಂಬಾ ಮುಜುಗರದ ಸನ್ನಿವೇಶ ನಿರ್ಮಾಣ ಮಾಡಿತ್ತು . ಮತ್ತು ಹಿಂದುತ್ವ ಮತ್ತು ದೇವಾಲಯಗಳಬಹಳ ಗ್ಗೆ ಮಾತನಾಡುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಾಲಯಗಳು ನೆಲಸಮ ಗೊಳ್ಳುತ್ತಿವೆ, ಧಾರ್ಮಿಕ ವಿಚಾರವನ್ನು ಕೇವಲ ಮತ ಬಳಕೆಗೆ ಮಾತ್ರ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದವು.

ಈ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಸರ್ಕಾರದ ಮತ್ತು ಪಕ್ಷದ ಭವಿಷ್ಯಕ್ಕೆ ಮುಂದೆ ಪೆಟ್ಟು ಕೊಡಲಿದೆ ಎಂಬುದನ್ನು ಅರಿತ ಸರ್ಕಾರ, ಮುಂದೆ ಯಾವುದೇ ರೀತಿಯಲ್ಲೂ ಇಂತಹ ಅತಾಚಾತುರ್ಯದ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಯಾವುದೇ ದೇವಾಲಯಗಳನ್ನು ನೆಲಸಮ ಮಾಡುವ ಮುಂಚೆ ಸರ್ಕಾರಕ್ಕೆ ತಿಳಿಸಿ ಅನುಮತಿ ಪಡೆಯುವ ಉದ್ದೇಶದಿಂದ ಈ ಮಸೂದೆ ಜಾರಿಗೆ ತರಲಾಗಿದೆ.

No Comments

Leave A Comment