
ಕಾಸರಗೋಡು ಚಿನ್ನಾ ಅವರ ತ್ರಿಭಾಷಾ ರಂಗ ನಾಟಕ ಪುಸ್ತಕ ಬಿಡುಗಡೆ
ಕೊಂಕಣಿ ಸಾಹಿತ್ಯ ಅಕಾಡೆಮಿಗೆ ವಿಶಿಷ್ಟ ಕಾಯಕಲ್ಪ ನೀಡಿ ಎಲ್ಲ ವರ್ಗದ ಕೊಂಕಣಿ ಭಾಷಿಕರನ್ನು ಗುರುತಿಸುವ ಕಾರ್ಯ ಮಾಡಿದ ಕಾಸರಗೋಡು ಚಿನ್ನಾ ಕನ್ನಡದ ಆಸ್ತಿ ಎಂದು ಶಾಸಕ ಕೆ. ರಘುಪತಿ ಕೃತಿ ಬಿಡುಗಡೆಗೊಳಿಸಿ ಭಟ್ ಹೇಳಿದರು. 
ಅನಂತ ವೈದಿಕ ಕೇಂದ್ರ ಆಶ್ರಯದಲ್ಲಿ ಚಲನಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಅವರ ಸೂಣೆ ಆನೀ ಸೂಣಿಬಾಲ ಹಾಗೂ ತ್ರಿಭಾಷಾ ರಂಗ ನಾಟಕ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡಿದ ಜಿಲ್ಲೆಗಳಾಗಿವೆ. ಕೊಂಕಣಿ, ಕನ್ನಡ ಮತ್ತು ತುಳು ಭಾಷಿಕ ಕೃತಿ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಸಮಾಜಕ್ಕೆ ಸಂದೇಶ ನೀಡುವ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಗೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರನ್ನು ಸನ್ಮಾನಿಸಲಾಯಿತು, ಹಾಸ್ಯ ಭಾಷಣಕಾರಿಣಿ ಸಂಧ್ಯಾ ಶೆಣೈ, ಕವಿ ಮನೋಹರ್ ನಾಯಕ್, ಪ್ರಶಸ್ತಿ ವಿಜೇತ ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಕುಡಾಳ ದೇಶಸ್ತ ಸಮಾಜದ ಮುಂದಾಳು ಮಹೇಶ್ ಠಾಕೂರ್, ಖಾರ್ವಿ ಸಮಾಜದ ಮುಖಂಡ ಕುಂದಾಪುರ ನಾರಾಯಣ ಖಾರ್ವಿ, ದೇಶ ಭಂಡಾರಿ ಸಮಾಜದ ಮುಂದಾಳು ಚಿದಾನಂದ ಭಂಡಾರಿ ಕಾಗಾಲ, ದೈವಜ್ಞ ಸಮಾಜದ ಮುಖಂಡ ರಾಜಗೋಪಾಲ ಶೇಟ್, ವೈಶ್ಯವಾಣಿ ಸಮಾಜದ ವಸಂತ್ ನಾಯಕ್, ಕಥೊಲಿಕ್ ಸಮಾಜ ಪ್ರತಿನಿಧಿ ವಿವಿಟಾ ಡಿಸೋಜ, ವಕೀಲ ಲಕ್ಷ್ಮಣ್ ಶೆಣೈ,ನಾಗಭೂಷಣ ಕಿಣಿ ಉಪಸ್ಥಿತರಿದ್ದರು.
ಅನಂತ ವೈದಿಕ ಕೇಂದ್ರದ ನಿರ್ದೇಶಕ ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿದರು. ಸ್ನೇಹಾ ವಿನೋದ್ ಪೈ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸ೦ಗೀತ ಕಲಾವಿದರಾದ ಮುಲ್ಕಿ ರವೀ೦ದ್ರ ಪ್ರಭುರವರ ಬಳಗದಿ೦ದ ಗಾನ ಸುಧಾ ಕಾರ್ಯಕ್ರಮ ಜರಗಿತು.
