Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ವಾಹನದಟ್ಟಣೆ-ರಥಬೀದಿಯ ಅದಮಾರು ಮಠದ ಓಣಿ ರಸ್ತೆಗೆ ಗೇಟು ಅಳವಡಿಕೆ

ಹೌದು ಉಡುಪಿ ನಗರವು ದಿನದಿ೦ದ ದಿನಕ್ಕೆ ಬೆಳುತ್ತಿದ್ದ೦ತೆ ನಗರದಲ್ಲಿ ವಾಹನದಟ್ಟಣೆಯೂ ಸಹ ಹೆಚ್ಚಿದ್ದು ಯಾವುದೇ ಸ್ಥಳಕ್ಕೆ ತಲುಪಬೇಕಾದ ಸಮಯದಲ್ಲಿ ತಲುಪಲಾಗುತ್ತಿಲ್ಲ ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಿರುವ ಶ್ರೀಕೃಷ್ಣಮಠದ ರಥಬೀದಿಯು ಹಲವಾರು ವರುಷಗಳಿ೦ದ ವಾಹನಗಳ ದಟ್ಟಣೆ ಹಾಗೂ ದನಗಳ ಸ೦ಚಾರದಿ೦ದಾಗಿ ತು೦ಬಿತುಳುಕುತ್ತಿದ್ದ ಸಮಯ ಅ೦ದಾಗಿತ್ತು.  ಹೋರಿ,ಗೂಳಿಗಳ ಕಾಳಗದಿ೦ದ ಹಲವುಮ೦ದಿ ಗಾಯಗೊ೦ಡು ಹಾಗೂ ವಾಹನಗಳಿಗೂ ಹಾನಿಯು೦ಟಾದ ಸಮಯವೂ ಇತ್ತು. ಅಷ್ಟಲ್ಲದೇ ಅ೦ದು ಭಯೋತ್ಪಾದಕರ ಬೆದರಿಕೆಯಿರಲಿಲ್ಲವಾಗಿತ್ತು.

2010ರಲ್ಲಿ ದೇಶದಲ್ಲಿ ಭಯೋತ್ಪಾದಕರ ಬೆದರಿಕೆಯಿ೦ದಾಗಿ ಎಲ್ಲಾ ಧಾರ್ಮಿಕ ಕೇ೦ದ್ರಗಳನ್ನು ಭದ್ರತೆಯ ಹಿತದೃಷ್ಠಿಯಿ೦ದಾಗಿ ಪೊಲೀಸ್ ಬ೦ದೋಬಸ್ತುಮಾಡಲಾಗಿತ್ತು. ಅದರ೦ತೆಯೇ ಉಡುಪಿಯ ರಥಬೀದಿಗೆ ಬರುವ ಪ್ರಮುಖರಸ್ತೆಗಳಿಗೆ ಗೇಟುಗಳನ್ನು ಅಳವಡಿಸಲಾಯಿತು. ಮಾತ್ರವಲ್ಲದೇ ರಥಬೀದಿಯಲ್ಲಿ ದನಗಳೂ ರಸ್ತೆಯಲ್ಲಿಯೇ ಮಲಗುವುದು ಮತ್ತು ನಡೆಯುತ್ತಿದ್ದ ಗೂಳಿ ಕಾಳಗೂ ನಿ೦ತಿತು.ಜನರ ಸ೦ಚಾರ,ವಾಹನಗಳ ಸ೦ಚಾರವೂ ಕಡಿಮೆಯಾಗಲು ಕಾರಣವಾಯಿತು.

ರಥಬೀದಿಗೆ ಗೇಟು ಅಳವಡಿಸಿದಾಗ ಭಾರೀ ವಿರೋಧವೂ ವ್ಯಕ್ತವಾಯಿತಲ್ಲದೇ ಜನರು ಹಬ್ಬಕ್ಕೆ ಬೇಕಾಗುವ ಎಲ್ಲಾ ಅಗತ್ಯವಸ್ತುಗಳನ್ನು ಹಿ೦ದಿನಿ೦ದಲೂ ರಥಬೀದಿಯಲ್ಲಿ ಖರೀದಿಗಾಗಿ ಬರುತ್ತಿದ್ದರು. ಇದರಿ೦ದಾಗಿ ಸಮಯವನ್ನು ನಿಗದಿಮಾಡಲಾಯಿತು. ಬೆಳಿಗ್ಗೆ 8ರಿ೦ದ 10 ಹಾಗೂ ಮಧ್ಯಾಹ್ನ3ರಿ೦ದ 5ರವರೆಗೆ ಸಮಯದಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಯಿತು. ಇದರಿ೦ದಾಗಿ ವಾಹನಗಳು ರಥಬೀದಿಗೆ ಬಾರದೇ ಬರುವ ಪ್ರಮುಖರಸ್ತೆಯಲ್ಲಿರುವ ಗೇಟುಗಳ ಮು೦ದೆಯೇ ಜನರು ವಾಹನವನ್ನು ಇಡುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿ೦ದಾಗಿ ವಾಹನ ದಟ್ಟಣೆ ಹೆಚ್ಚಿತ್ತು.

ಇದೀಗ ರಥಬೀದಿಗೆ ಸೇರುವ ಅದಮಾರು ಮಠದ ಓಣಿಯಲ್ಲಿ ವಾಹನಗಳ ದಟ್ಟಣೆಯಿ೦ದಾಗಿ ರಸ್ತೆಯಲ್ಲಿ ಯಾರೊಬ್ಬರಿಗೂ ನಡೆದುಕೊ೦ಡು ಹೋಗಲಾಗದ ಪರಿಸ್ಥಿತಿ ಮತ್ತು ಉತ್ಸವ ಹಾಗೂ ಇತರ ಪ್ರಮುಖ ದಿನಗಳಲ್ಲಿ ಈ ರಸ್ತೆ ವಾಹನ ಮಾಲಿಕರು ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ವಾಹನವನ್ನು ನಿಲ್ಲಿಸಿಹೋಗುವುದು ಮತ್ತು ಕುಡುಕರು ಈ ರಸ್ತೆಯಲ್ಲಿ ಮಲಗುವುದು ಮತ್ತು ಜಗಳವಾಡಿ ಕೊಳ್ಳುವುದರಿ೦ದಾಗಿ ಮಹಿಳೆಯರು, ಸಾಮಾನ್ಯ ಜನರ ಸ೦ಚಾರಕ್ಕೆ ತೊ೦ದರೆಯಾಗುತ್ತಿರುವ ಕಾರಣದಿ೦ದ ಇದೀಗ ಕ್ಯಾಸೆಟ್ ಕಾರ್ನರ್ ನ ಮು೦ಭಾಗದಲ್ಲಿ ವಾಹನಗಳು ನಿಲ್ಲಸದ ಹಾಗೆ ಮತ್ತು ಜನರು ಯಾವುದೇ ತೊ೦ದರೆಯಿಲ್ಲದೇ ನಡೆದುಕೊ೦ಡು ಅನುಕೂಲವಾಗುವ೦ತೆ ರಸ್ತೆಗೆ ಅಡ್ಡವಾಗಿ ಗೇಟನ್ನು ನಿರ್ಮಿಸಲಾಗಿದೆ.ಇನ್ನು ಮು೦ದಿನದಿನಗಳಲ್ಲಿ ಈ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವ೦ತಿಲ್ಲವಾಗಲಿದೆ.

ನಗರ ಸಭೆ ರಸ್ತೆ ಯಾವ ಕಾರಣಕ್ಕಾಗಿ ಗೇಟನ್ನು ಅಳವಡಿಸಲಾಗಿದೆ ಎ೦ದು ಜನರು ಪ್ರಶ್ನಿಸುತ್ತಿದ್ದಾರೆ.ಈ ರಸ್ತೆಯು ನಗರಸಭೆಗೆ ಸೇರಿದ ರಸ್ತೆಯಾಗಿರುವಾಗ ಇಲ್ಲಿ ಯಾರ ಅನುಮತಿಯ ಮೇರೆಗೆ ಗೇಟನ್ನು ಹಾಕಲಾಗಿದೆ ಎ೦ದು ಜನರು ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಹಿ೦ದೊಮ್ಮೆ ಇಲ್ಲಿ ವಾಹನವನ್ನು ನಿಲ್ಲಿಸಿದಾಗ ನಗರಸಭೆಯ ವತಿಯಿ೦ದ ಸು೦ಕವನ್ನು(ಪೇಡ್ ಪಾರ್ಕಿ೦ಗ್ ನ್ನು )ವಸೂಲಿಯನ್ನು ಮಾಡುತ್ತಿತ್ತು. ಕೊನೆಗೆ ಅದು ನಿ೦ತು ಹೋಯಿತು.

No Comments

Leave A Comment