Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಕಾರ್ಕಳ ದೇವಕೀ ಕೃಷ್ಣ ರಾವಳನಾಥ ದೇವಳದಲ್ಲಿ ಚ೦ಡಿಕಾ ಹೋಮ ಸ೦ಪನ್ನ

ಕಾರ್ಕಳ ; ಶ್ರೀ ದೇವಕೀ ಕೃಷ್ಣ ರಾವಳನಾಥ ತೆಳ್ಳಾರ್ ರಸ್ತೆ ಕಾರ್ಕಳ ನವರಾತ್ರಿ ಅಂಗವಾಗಿ 19 ನೇ ಮಂಗಳವಾರ ಸಾಮೂಹಿಕ ಪ್ರಾರ್ಥನೆ , ಗುರು ಗಣಪತಿ ಪೂಜೆ, ಪಂಚಾಮೃತಾ ಅಭಿಷೇಕ ,ಸಾನಿಧ್ಯ ಹವನ , ದ್ವಾದಶ ಕಲಶಾಭಿಷೇಕ , ಹುಣ್ಣೆಮೆ ಕಾರ್ಯಕ್ರ್ರಮ ನೆಡೆಯಿತು .

ವೇ . ಮೂ . ಸಂದೀಪ್ ಭಟ್ ಮಾರ್ಗದರ್ಶನದಲ್ಲಿ ದೇವರ ಸನ್ನಿಧಿಯಲ್ಲಿ ಚಂಡಿಕಾಯಾಗ ನೆಡೆಯಿತು.

ಹೋಮ ಪೂಜಾ ಕಾರ್ಯದಲ್ಲಿ ನಾರಾಯಣ ಕಾಮತ್ ದಂಪತಿ ಕಂಭದಕೋಣೆರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಪೂರ್ಣಾಹುತಿ ಬಳಿಕ ಕುಮಾರಿ ಪೂಜೆ , ಸುಹಾಸನಿ ಪೂಜೆ , ಮಹಾ ಪೂಜೆ ಬಳಿಕ ಸಮಾರಾಧನೆ ಜರಗಿತು.

ದೇವಳದ ಅಧ್ಯಕ್ಷರಾದ ಸುಧಾಕರ್ ಪ್ರಭು , ಖಂಚಾಚಿ ಗಣೇಶ್ ಕಾಮತ್ , ಕಾರ್ಯದರ್ಶಿ ವಸಂತ್ ಪ್ರಭು,ರಾಮರಾಯ ಪ್ರಭು, ದೇವದಾಸ್ ಕಾಮತ್ ಉಡುಪಿ , ವಿನೋದ್ ಪ್ರಭು , ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು ಸೇರಿದ೦ತೆ ಕಾಮತ್ ಕುಟು೦ಬಸ್ಥರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.

No Comments

Leave A Comment