ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ಮಂಗಳೂರಿನ ಅಪೇಕ್ಷಾ ಫೆರ್ನಾಂಡೀಸ್
ಮಂಗಳೂರು, ಅ.23 : ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅಪೇಕ್ಷಾ ಫೆರ್ನಾಂಡೀಸ್ 3 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
16 ವರ್ಷದ ಅಪೇಕ್ಷಾ ಬಾವ್ಲಾನ್ ಹಾಗೂ ಶಾಲೇಟ್ ಫೆರ್ನಾಂಡೀಸ್ ದಂಪತಿಯ ಪುತ್ರಿ. ಇವರು ಮಂಗಳೂರಿನವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅಪೇಕ್ಷಾ ಬಂಟ್ಸ್ ಸಂಘದ ಎಸ್ ಎಂ ಶೆಟ್ಟಿ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಪೂವಾಯಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ. ಅಪೇಕ್ಷಾ ಐಐಟಿ ಬಾಂಬೆ ಪೂಲ್ ಹಾಗೂ ಹಿರಾನಂದನಿ ಫಾರೆಸ್ಟ್ ಕ್ಲಬ್‌ನಲ್ಲಿ ಡಾ. ಮೋಹನ್ ರೆಡ್ಡಿ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಅಪೇಕ್ಷಾ ಅವರು 15-17 ವರ್ಷದೊಳಗಿನ ವರ್ಗ 1ರ ಅಡಿಯಲ್ಲಿ ಜೂನಿಯರ್ ರಾಷ್ಟ್ರಗಳಲ್ಲಿ ಭಾಗವಹಿಸಿದ್ದು, ಮೂರ ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಪಡೆದಿದ್ದಾರೆ. ಅವರು ಅಕ್ಟೋಬರ್ 26ರಿಂದ 29ರವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಮೊದಲು ಅಪೇಕ್ಷಾ ಯು14 ವಿಭಾಗದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ 37ನೇ ಸಬ್ ಜೂನಿಯರ್ ಹಾಗೂ 47ನೇ ಜೂನಿಯರ್ ಈಜು ಸ್ಪರ್ಧೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅಪೇಕ್ಷಾ ನಾಲ್ಕು ವಿಭಾಗಗಳಲ್ಲಿ ಪದಕ ಪಡೆದುಕೊಂಡಿದ್ದಾರೆ.
ಅಪೇಕ್ಷಾ 200 ಮೀಟರ್ ವೈಯಕ್ತಿಕ ಮಿಡ್‌ರಿಲೆ, 50 ಮೀಟರ್ ಬ್ರೆಸ್ ಸ್ಟ್ರೋಕ್, 200 ಮೀಟರ್ ಬಟರ್‌ಪ್ಯಾಯ್ ಸ್ಟ್ರೋಕ್, 100 ಮೀಟರ್ ಬಟರ್‌ಪ್ಯಾಯ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಪ್ರಸ್ತುತ, ಅವರು ಮಹಾರಾಷ್ಟ್ರ ತಂಡಕ್ಕಾಗಿ 200 ಮೀಟರ್, 50 ಮೀಟರ್ ಮತ್ತು 4×100 ಮೀಟರ್ ಮಿಡ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ದಾಖಲೆ ಗಳಿಸಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ಅಪೇಕ್ಷಾ ಅವರ ತಾಯಿ ಶಾಲೆಟ್, ಇದು ಅಪೇಕ್ಷಾನ ಗಮನಾರ್ಹ ಸಾಧನೆಯಾಗಿದೆ. ತರಬೇತಿ ಹಾಗೂ ಅಧ್ಯಯನದ ನಡುವೆ ಸಹಾಯ ಮಾಡಿದ ಶಾಲೆಯ ಪ್ರಾಂಶುಪಾಲರಿಗೆ ಧನ್ಯವಾದ ಹೇಳಬೇಕು ಎಂದು ತಿಳಿಸಿದ್ದಾರೆ.
ಅಪೇಕ್ಷಾಳ ಕೋಚ್ ಡಾ, ರೆಡ್ಡಿ ಹಾಗೂ ರಿತೇಶ್ ಇವರಿಬ್ಬರ ಶ್ರಮದಿಂದ ಅಪೇಕ್ಷಾ ಈ ಸಾಧನೆ ಮಾಡಿದ್ದಾಳೆ. ಅಪೇಕ್ಷಾ, ತನ್ನ ಶಾಲೆಯ ಪ್ರಾಂಶುಪಾಲ ಮಿಲ್ಡ್ರೆಡ್ ಲೋಬೋ ಹಾಗೂ ಶಿಕ್ಷಕರ ತಂಡವು ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞಳಾಗಿದ್ದಾಳೆ ಎಂದಿದ್ದಾರೆ.