Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಭಜರಂಗಿ-2 ‘ಚಿಣಮಿಣಿಕೆ’; ದಿ ಲೇಡಿ ಫೈರ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಕ್ಯಾರೆಕ್ಟರ್: ಭಾವನಾ ಮೆನನ್

ಟಗರು ಸಿನಿಮಾ ನಂತರ ನಟಿ ಭಾವನಾ ಮತ್ತು ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ, ಹರ್ಷ ಮತ್ತು ಜಯಣ್ಣ ಕಂಬೈನ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಭಾವನಾ ಉತ್ಸುಕರಾಗಿದ್ದರಂತೆ.

“ಹರ್ಷ ನೃತ್ಯ ನಿರ್ದೇಶಕರಾಗಿದ್ದಾಗಲೂ ಚಿತ್ರಕ್ಕೆ ತಂಡವನ್ನು ಸೇರಿಸುವ ಬಗ್ಗೆ ನಾವಿಬ್ಬರು ಚರ್ಚಿಸುತ್ತಿದ್ದೆವು. ಇದು ಅಂತಿಮವಾಗಿ ಭಜರಂಗಿ 2 ನೊಂದಿಗೆ ಕಾರ್ಯರೂಪಕ್ಕೆ ಬಂದಿದೆ ಎಂದು ಭಾವನಾ ಹೇಳಿದ್ದಾರೆ.

ಭಾಷೆಯ ಹೊರತಾಗಿಯೂ ಫ್ಯಾಂಟಸಿ ಚಿತ್ರಗಳ ದೊಡ್ಡ ಅಭಿಮಾನಿಯಾಗಿದ್ದೆ ಎಂದು ಭಾವನಾ ಒಪ್ಪಿಕೊಂಡಿದ್ದಾರೆ.  ಹರ್ಷ ನ  ಕಥೆ ಕೇಳಿದ ಹತ್ತು ನಿಮಿಷಗಳಲ್ಲಿ, ನಾನು ಪ್ರಾಜೆಕ್ಟ್ನ ಭಾಗವಾಗಲು ನಿರ್ಧರಿಸಿದೆ.  ಚಿಣಮಿಣಕಿ  ಪಾತ್ರ ನಿರ್ವಹಿಸುವುದು ಸವಾಲಾಗಿತ್ತು.

ಪಾತ್ರಕ್ಕೆ ಬೇಕಾದ ವೇಷ ಭೂಷಣ ವನ್ನು ನಾನು ಆನಂದಿಸಿದೆ.  ಪಾತ್ರದ ಬಗ್ಗೆ ಹೇಳಿದ ಭಾವನಾ, ಅವಳು ತುಂಬಾ ಬೋಲ್ಡ್, ಹಾಗೂ ಆಕೆಯ ಮಾತನ್ನು ಯಾರು ಮೀರಬಾರದೆಂಬ ಆದೇಶ, ಅದರ ಜೊತೆಗೆ ಮುಗ್ಧತೆ ಮತ್ತು ಮೋಡಿ,ಇದೊಂದು ತರ ಥಗ್ ಕ್ಯಾರೆಕ್ಟರ್ ಎಂದದು ಭಾವನಾ ಹೇಳಿದ್ದಾರೆ.

ನಾನು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅನೇಕ ನಟರೊಂದಿಗೆ ಕೆಲಸ ಮಾಡಿದ್ದೇನೆ, ಶಿವಣ್ಣನಂತಹ ವ್ಯಕ್ತಿಯನ್ನು ಭೇಟಿಯಾಗುವುದು ಅಪರೂಪ ಎಂಬುದು ನನ್ನ ನಂಬಿಕೆ. ಅವರು ಸ್ನೇಹಪರ ಮತ್ತು ಒಳ್ಳೆಯ ಹೃದಯದ ವ್ಯಕ್ತಿ,  ಅತ್ಯಂತ ವಿನಮ್ರ ಮನುಷ್ಯರಲ್ಲಿ ಒಬ್ಬರಾಗಿರುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಕೇಸ್  ವೊಂದರ ನ್ಯಾಯಾಲಯದ ವಿಚಾರಣೆಯಿಂದಾಗಿ, ನಾನು ಅನೇಕ ಮಲಯಾಳಂ ಸಿನಿಮಾಗಳನ್ನು ಕೈಬಿಡಬೇಕಾಯಿತು. ಚಿತ್ರರಂಗದಿಂದ ದೂರ ಉಳಿಯುವುದು ಸರಿಯೋ ಇಲ್ಲವೋ ಗೊತ್ತಿಲ್ಲ. ಕನ್ನಡದಲ್ಲೂ ನಾನು ಯಾವುದೇ ಚಿತ್ರಗಳಿಗೆ ಸಹಿ ಮಾಡಿಲ್ಲ,  ತಮಿಳು ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡಿದ ಭಾವನಾ, ನಾನು ಕಮ್ ಬ್ಯಾಕ್ ಮಾಡಲು ಬಯಸುವುದಿಲ್ಲ. ಎರಡು ತಮಿಳು ಯೋಜನೆಗಳು ನನಗೆ ಬಂದವು, ಆದರೆ ಕಥೆಗಳು ನನಗೆ ತೃಪ್ತಿಯಾಗಲಿಲ್ಲ, ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.  ಭಜರಂಗಿ 2 ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಯು/ಎ ಸರ್ಟಿಪಿಕೇಟ್ ನೊಂದಿಗೆ ಪಾಸ್ ಆಗಿದ್ದು, ಅಕ್ಟೋಬರ್ 29 ರಂದು ರಿಲೀಸ್ ಆಗಲಿದೆ.

No Comments

Leave A Comment