Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಹಾಲಿವುಡ್ ಚಿತ್ರದ ಚಿತ್ರೀಕರಣ ವೇಳೆ ದುರಂತ: ನಟ ಆಲೆಕ್‌ ಬಾಲ್ಡ್‌ವಿನ್‌ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ

ಲಾಸ್‌ ಏಂಜಲೀಸ್‌:  ಹಾಲಿವುಡ್ ಸಿನಿಮಾ ಚಿತ್ರೀಕರಣ ವೇಳೆ ದುರಂತವೊಂದು ಸಂಭವಿಸಿದ್ದು, ನಟ ಆಲೆಕ್‌ ಬಾಲ್ಡ್‌ವಿನ್‌ ಸಿಡಿಸಿದ ಗುಂಡು ಗುರಿ ತಪ್ಪಿ ಛಾಯಾಗ್ರಾಹಕಿಗೆ ಬಿದ್ದಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್‌ ಬಾಲ್ಡ್‌ವಿನ್‌ ಬಳಸುತ್ತಿದ್ದ ಬಂದೂಕಿನಿಂದ ಹಾರಿದ ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ.  ‘ರಸ್ಟ್‌’ (Rust) ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಪಾರ್ಪಟಿ ಗನ್‌ನಿಂದ ನಟ ಬಾಲ್ಡ್‌ವಿನ್‌ ಸಿಡಿಸಿದ ಗುಂಡು ಒಬ್ಬರ ಸಾವಿಗೆ ಕಾರಣವಾಗಿದೆ.  ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ ನಡೆದಿದೆ.

ಈ ಘಟನೆಯಲ್ಲಿ ಛಾಯಾಗ್ರಾಹಕಿ ಹಲಿನಾ ಹಚಿನ್ಸ್‌ (42 ವರ್ಷ) ಸಾವಿಗೀಡಾದರೆ, ನಿರ್ದೇಶಕ ಜೋಲ್‌ ಸೌಜಾ (48) ಗಾಯಗೊಂಡಿದ್ದಾರೆ. 19ನೇ ಶತಮಾನದ ಕಥೆಯಾಧಾರಿತ ಸಿನಿಮಾದಲ್ಲಿ ಬಾಲ್ಡ್‌ವಿನ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಯಾವುದೇ ದೂರು ದಾಖಲಾಗಿಲ್ಲ.

42 ವರ್ಷದ ಸಿನೆಮಾಟೋಗ್ರಾಫರ್ ಅನ್ನು ಹೆಲಿಕಾಪ್ಟರ್ ಮೂಲಕ ಅಲ್ಬುಕರ್ಕ್ ನ ನ್ಯೂ ಮೆಕ್ಸಿಕೋ ಆಸ್ಪತ್ರೆಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟರು.  ಸಾಂತಾ ಫೆ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ ಸೌಜಾರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಕ್ರಿಸ್ಟಸ್ ಸೇಂಟ್ ವಿನ್ಸೆಂಟ್ ಪ್ರಾದೇಶಿಕ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.

No Comments

Leave A Comment