Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಶಾರೂಕ್ ಖಾನ್ ಗೆ ಎನ್ ಸಿಬಿ ಮತ್ತೆ ಶಾಕ್: ನಿವಾಸಕ್ಕೆ ಆಗಮಿಸಿ ಅಧಿಕಾರಿಗಳು ಶೋಧ, ನಟಿ ಅನನ್ಯಾ ಪಾಂಡೆಗೆ ಸಮನ್ಸ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಶಾರೂಕ್ ಖಾನ್ ನಿವಾಸ ‘ಮನ್ನತ್’ಗೆ ಆಗಮಿಸಿ ಶೋಧ ನಡೆಸುತ್ತಿದ್ದಾರೆ.

ಎನ್ ಸಿಬಿ ಅಧಿಕಾರಿಗಳು ಯಾವ ಮಾಹಿತಿಯನ್ನು ಕಲೆ ಹಾಕಲು ಶಾರೂಕ್ ಖಾನ್ ನಿವಾಸಕ್ಕೆ ಆಗಮಿಸಿದ್ದಾರೆ, ನಟನ ಮನೆಯಲ್ಲಿ ಏನು ಶೋಧ, ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ವಿವರ ಸಿಕ್ಕಿಲ್ಲ.

ಇನ್ನೊಂದೆಡೆ ಎನ್ ಸಿಬಿಯ ಡ್ರಗ್ ವಿರೋಧಿ ತಂಡ ನಟಿ ಅನನ್ಯಾ ಪಾಂಡೆ ನಿವಾಸಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ ವಿಚಾರಣೆಗೆ ಬರುವಂತೆ ನಟಿಗೆ ಸಮನ್ಸ್ ನೀಡಿದ್ದಾರೆ. ಇನ್ನೂ ಹಲವು ಬಾಲಿವುಡ್ ನಟ-ನಟಿಯರ ನಿವಾಸಕ್ಕೆ ತೆರಳಿ ಎನ್ ಸಿಬಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ನಟಿ ಅನನ್ಯ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸ್ನೇಹಿತೆಯಾಗಿದ್ದು ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ ಆರ್ಯನ್ ಖಾನ್ ಮೊಬೈಲ್ ನಲ್ಲಿ ಸಿಕ್ಕಿದೆ, ಇದಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ವಿಚಾರಣೆಗೆ ಕರೆದಿದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ಮುಂಬೈಯ ಅರ್ಥೂರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನು ಭೇಟಿ ಮಾಡಲು ನಟ ಶಾರೂಕ್ ಖಾನ್ ತೆರಳಿದ್ದರು.

No Comments

Leave A Comment