Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಹೋಮ್ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ: ಕ್ಷಣದಲ್ಲೇ ಹಾರಿಹೋಯಿತು ಪ್ರಾಣಪಕ್ಷಿ!

ಚುರು: ಹೋಮ್​ವರ್ಕ್​ ಮಾಡದಿದ್ದಕ್ಕೆ ಶಿಕ್ಷಕನಿಂದ ಹಲ್ಲೆಗೊಳಗಾದ ಏಳನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಚುರು ಜಿಲ್ಲೆಯ ಸಲಸರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಹೋಮ್​​ವರ್ಕ್​ ಮಾಡಿಲ್ಲ ಎಂದು ಶಿಕ್ಷಕ ಮಗುವನ್ನು ನೆಲಕ್ಕೆ ಹಾಕಿ ಒದ್ದು, ಮುಷ್ಟಿಕಟ್ಟಿ ಹೊಡೆದಿದ್ದಾನೆ. ತುಂಬಾ ಹೊಡೆದ ನಂತರ ಬಾಲಕನ ಮೂಗಿನಿಂದ ರಕ್ತ ಬರಲಾರಂಭಿಸಿದೆ. ಬಳಿಕ ಆತ ಮೂರ್ಛೆ ಹೋಗಿದ್ದಾನೆ. ಮಗುವಿಗೆ ಪ್ರಜ್ಞೆ ಮರಳದಿದ್ದಾಗ, ಆರೋಪಿತ ಶಿಕ್ಷಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ವಿದ್ಯಾರ್ಥಿ  ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಕೋಲಾಸಾರ್ ಗ್ರಾಮದ ನಿವಾಸಿ 13 ವರ್ಷದ ಗಣೇಶ್ ಖಾಸಗಿ ಶಾಲೆಯಲ್ಲಿ ಓದಿದ್ದಾನೆ. ಬುಧವಾರ ಬೆಳಗ್ಗೆ ಮಗು ಶಾಲೆಗೆ ಹೋಗಿತ್ತು. ಹೋಮ್​ವರ್ಕ್ ಮಾಡದ ಕಾರಣ ಶಿಕ್ಷಕ ಮನೋಜ್ ತುಂಬಾ ಹೊಡೆದಿದ್ದಾರೆ. ಈ ಕಾರಣದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ತಂದೆಯ ವರದಿಯ ಮೇರೆಗೆ ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಲಸಾರ್ ಎಸ್ ಎಚ್ ಒ ಸಂದೀಪ್ ವಿಷ್ಣೋಯ್ ಹೇಳಿದ್ದಾರೆ.

No Comments

Leave A Comment