ಉಡುಪಿ :ಜಿ ಎಸ್ ಬಿ ಯುವಕ ಮಂಡಳಿಯ 51 ನೇ ವಾರ್ಷಿಕೋತ್ಸವ -ದೇವಳದಲ್ಲಿ ಸೇವೆಗೈದದವರಿಗೆ ಸನ್ಮಾನ ಉಡುಪಿ: ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 51 ನೇ ವಾರ್ಷಿಕೋತ್ಸವ ಅಕ್ಟೋಬರ್ 14 ರಂದು ನೆಡೆಯಿತು . ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಡಾ ಕಲ್ಯಾ ವಿನಾಯಕ ಶೆಣೈ ದಂಪತಿಗಳು, ದೇವಳದ ಕಾರ್ಯಗಳಲ್ಲಿ ವಿಶೇಷ ಸೇವೆಗೈದ ನೀಲಕಂಠ ಭಾಗವತ್ , ದೀಪಕ್ ಭಟ್ , ಶ್ವೇತಾ ಭಾಗವತ್ , ಪ್ರತೀಕ್ ಕಾಮತ್ರವರನ್ನು ಗೌರವಿಸಲಾಯಿತು . ಯುವಕ ಮಂಡಳಿಯ ಆಶ್ರಯ ದಲ್ಲಿ ನೆಡೆದ ವಿವಿಧ ಆಟೋಟ ಸ್ಫರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸದರು. ದೇವಳದ ಆಡಳಿತ ಮುಕ್ತೇಸ್ತರರಾದ ದೇವಳದವತಿಯಿಂದ ಪಿ ವಿ ಶೆಣೈ, ಡಾ ಶೆಣೈ ದಂಪತಿ ಗಳನ್ನು ಗೌರವಿಸಿದರು. GSB ಯುವಕ ಮಂಡಳಿಯ ಅಧ್ಯಕ್ಷ ಕೆ ನಿತೀಶ ಶೆಣೈ , ಮಾಜಿ ಅಧ್ಯಕ್ಷ ಟಿ ಸುಬ್ಬಣ್ಣ ಪೈ, ಮುಂತಾದವರು ಉಪಸ್ಥಿತರಿದ್ದರು ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು. Share this:TweetWhatsAppEmailPrintTelegram